ಧಾರ್ಮಿಕ

ನಂದಿಕೂರಿನಲ್ಲಿ ಶ್ರಾವಣ ಭಜನೆ: ಸಾಮಗ್ರಿಗಳ ವಿತರಣೆ

ಒಂದು ತಿಂಗಳ ಕಾಲ ಪ್ರತಿನಿತ್ಯ ಭಜನೆ; ಭಕ್ತರಿಗಾಗಿ ಅಗತ್ಯ ಸಾಮಗ್ರಿಗಳ ವಿತರಣೆ

ಕಲಬುರಗಿ, ಆ.25: ನಗರದ ಹೊರವಲಯದ ನಂದಿಕೂರು ಗ್ರಾಮದಲ್ಲಿ ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ ನಿರಂತರವಾಗಿ ಪ್ರತಿನಿತ್ಯ ಭಜನೆ ಕಾರ್ಯಕ್ರಮ ಆರಂಭಗೊಂಡಿದೆ. ಕಾರ್ಯಕ್ರಮದ ವ್ಯವಸ್ಥಾಪಕಿ ತೆಲ್ಕರ್ ನಗರದ ಮಹಿಳಾ ಸ್ವಸಹಾಯ ಸಂಘದ ಪ್ರಭಾವತಿ ಅವರಿಗೆ ಶಿವಲಿಂಗ ಶರಣರು ನಂದಿಕೂರು ಅವರ ವತಿಯಿಂದ ಡೋಲಕ್ ಸೇರಿದಂತೆ ಭಜನೆಗೆ ಅಗತ್ಯವಿರುವ ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ ಅವರು ಜಮಖಾನೆಗಳನ್ನು ಒದಗಿಸಿದರು. ಉದ್ಯಮಿ ನಾರಾಯಣ ಸರ್ವ ಶೆಟ್ಟಿ ಅವರು ಕೂಡ ವಿವಿಧ ಸಾಮಗ್ರಿಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಸಹಕರಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಅನಿತಾ ಪವನಕುಮಾರ್ ವಳಕೇರಿ, ಚಂದ್ರಕಲಾ ಎಚ್. ಪ್ರಭುಗೋಳ, ರೋಷನ್ ಬಿ. ಉತ್ತನಾಳ, ಅಂಬಿಕಾ ಎಸ್. ಮಡಿವಾಳ, ಆಶಾ ಬಿ. ಮುಚ್ಕೇಡ, ಸಂಗಮೇಶ್ ಮಡಿವಾಳ, ಬೀರಪ್ಪ ಎಸ್. ಮುಚ್ಛಖೇಡ, ಪವನಕುಮಾರ್ ಬಿ. ವಳಕೇರಿ ಹಾಗೂ ಹೂವಣ್ಣ ಪ್ರಭುಗೋಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶ್ರಾವಣ ಮಾಸದ ಅಂಗವಾಗಿ ಪ್ರತಿದಿನ ನಡೆಯುತ್ತಿರುವ ಭಜನೆ ಕಾರ್ಯಕ್ರಮವು ಗ್ರಾಮದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಿಸಿದ್ದು, ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button