ಧಾರ್ಮಿಕ
ನಾಳೆ ನವಲದಿ ಶ್ರೀ ಹನುಮಾನ್ ಮಂದಿರದ ವರ್ಧಂತಿ ಮಹೋತ್ಸವ
ವಿಶೇಷ ಪೂಜೆ, ಮಹಾಪ್ರಸಾದ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮ ಆಯೋಜನೆ

ಕಲಬುರಗಿ, ಆ.26- ನಗರದ ಹೈಕೋರ್ಟ್ ರಸ್ತೆಯಲ್ಲಿರುವ ಶರಣರಾಜ್ ಸಿಟಿಯ ನವಲದಿ ಶ್ರೀ ಹನುಮಾನ್ ಮಂದಿರದ ವರ್ಧಂತಿ ಮಹೋತ್ಸವವು ಆಗಸ್ಟ್ 27ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಹೋತ್ಸವದ ಅಂಗವಾಗಿ ಬೆಳಗ್ಗೆ ಹೋಮ-ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವಿತರಣೆ ನಡೆಯಲಿದೆ.
ಸಂಜೆ 6 ಗಂಟೆಗೆ ಖ್ಯಾತ ಹಾಸ್ಯ ಕಲಾವಿದರಾದ ಶರಣು ದೇಸಾಯಿ ಹಾಗೂ ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಲಿದೆ.
ಮಹೋತ್ಸವದಲ್ಲಿ ಸಮಸ್ತ ಕಾಲೋನಿ ಬಾಂಧವರು, ಸುತ್ತಮುತ್ತಲಿನ ಪ್ರದೇಶಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಹನುಮಂತ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ದೇವಸ್ಥಾನ ಸಮಿತಿ ಮನವಿ ಮಾಡಿದೆ.



