ಕಲಬುರಗಿಯಲ್ಲಿ ಉಜ್ಜಯಿನಿ ಜಗದ್ಗುರುಗಳಿಂದ ಆಗಸ್ಟ್ 3ರಿಂದ ಆಧ್ಯಾತ್ಮಿಕ ಪ್ರವಚನ ಸರಣಿ
ಐದು ದಿನಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರಿಗೆ ಆಶೀರ್ವಚನ ಹಾಗೂ ವಚನ ಸಾಹಿತ್ಯದ ಸಂದೇಶ

ಕಲಬುರಗಿ, ಆ.1: ನಗರದ ಶಹಾಬಜಾರ್ ಬಡಾವಣೆಯ ಸೊಗಸನಕೇರಿ ಶ್ರೀ ಗುರುಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಶ್ರೀಮದ್ ಉಜ್ಜಯಿನಿ ಸದ್ಧರ್ಮಸಿಂಹಾಸನಾಧೀಶ್ವರ ಜಗದ್ಗುರು ಸಿದ್ದಲಿಂಗರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರಿಂದ 19ನೇ ವರ್ಷದ ಆಶಾಢ ಮಾಸದ ಪ್ರವಚನ ಹಾಗೂ ಆಧ್ಯಾತ್ಮಿಕ ಆಶೀರ್ವಚನ ಕಾರ್ಯಕ್ರಮ ಆಗಸ್ಟ್ 3ರಿಂದ 7ರವರೆಗೆ ನಡೆಯಲಿದೆ.
ಈ ಕುರಿತು ಪಂಚಪೀಠದ ವಾರ್ತಾಧಿಕಾರಿ ಸಿದ್ರಾಮಪ್ಪ ಆಲಗೂಡಕರ ಮಾಹಿತಿ ನೀಡಿ, ‘ಶ್ರೀ ಸಿದ್ಧಾಂತ ಶಿಖಾಮಣಿ ವಚನ ಸಾಹಿತ್ಯ ಸಮನ್ವಯಾತ್ಮಕ ಆಧ್ಯಾತ್ಮಿಕ ಆಶೀರ್ವಚನ’ ಎಂಬ ವಿಷಯದಡಿ ಐದು ದಿನಗಳ ಕಾಲ ವಿಶೇಷ ಪ್ರವಚನಗಳು ನಡೆಯಲಿವೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದ ನೇತೃತ್ವವನ್ನು ಕಡಗಂಚಿಯ ವೀರಭದ್ರ ಶಿವಾಚಾರ್ಯರು ವಹಿಸಲಿದ್ದಾರೆ. ಧರ್ಮಸಭೆಯಲ್ಲಿ ವಿವಿಧ ಮಠಾಧೀಶರು, ಹರಗುರುಗಳು, ರಾಜಕೀಯ ಗಣ್ಯರು, ಧರ್ಮಾಭಿಮಾನಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.
ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಜಗದ್ಗುರುಗಳ ಪ್ರವಚನ ಆಲಿಸಿ ಆಧ್ಯಾತ್ಮಿಕ ಸಂದೇಶದ ಸದುಪಯೋಗ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.



