ಸಾರಿಗೆ

ಕಲ್ಯಾಣ ಕರ್ನಾಟಕಕ್ಕೆ ಶೀಘ್ರ ಎಲೆಕ್ಟ್ರಿಕ್ ಬಸ್ ಸೇವೆ: ದೆಹಲಿ ಭೇಟಿ ಫಲ ನೀಡಿದ ಅರುಣಕುಮಾರ್ ಎಂ.ವೈ. ಪಾಟೀಲ್

ದೆಹಲಿ ಇ-ಬಸ್ ಘಟಕಕ್ಕೆ ಭೇಟಿ ನೀಡಿ ತಾಂತ್ರಿಕ ಮಾಹಿತಿ ಸಂಗ್ರಹಿಸಿದ ಕೆಕೆಆರ್‌ಟಿಸಿ ಅಧ್ಯಕ್ಷ; ಶೀಘ್ರದಲ್ಲೇ ಪರಿಸರ ಸ್ನೇಹಿ ಸಾರಿಗೆ ಸೇವೆ

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ವ್ಯಾಪ್ತಿಯಲ್ಲಿ ಶೀಘ್ರದಲ್ಲೇ ಎಲೆಕ್ಟ್ರಿಕ್ ಬಸ್‌ಗಳ ಸೇವೆ ಆರಂಭಿಸಲು ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ್ ಅವರು ನವದೆಹಲಿಯ ಇಂದ್ರಪ್ರಸ್ಥ ಇ-ಬಸ್ ಘಟಕಕ್ಕೆ ಭೇಟಿ ನೀಡಿ ಕಾರ್ಯಾಚರಣೆ ಹಾಗೂ ತಾಂತ್ರಿಕ ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ಪಡೆದರು.

ಭೇಟಿಯ ವೇಳೆ ಇ-ಬಸ್ ಘಟಕದ ಅಧಿಕಾರಿಗಳು ಮತ್ತು ವ್ಯವಸ್ಥಾಪಕ ಸೋನಂ ಅವರು ಎಲೆಕ್ಟ್ರಿಕ್ ಬಸ್‌ಗಳ ತಾಂತ್ರಿಕ ವೈಶಿಷ್ಟ್ಯಗಳು, ದೈನಂದಿನ ಕಾರ್ಯಾಚರಣೆ, ಬ್ಯಾಟರಿ ಸಾಮರ್ಥ್ಯ, ಮೈಲೇಜ್, ಚಾರ್ಜಿಂಗ್ ವ್ಯವಸ್ಥೆ, ನಿರ್ವಹಣಾ ವಿಧಾನ ಹಾಗೂ ಭವಿಷ್ಯದ ಸಾರ್ವಜನಿಕ ಸಾರಿಗೆಯಲ್ಲಿ ಇ-ಬಸ್‌ಗಳ ಪಾತ್ರದ ಕುರಿತು ವಿವರಿಸಿದರು.

ಅರುಣಕುಮಾರ್ ಪಾಟೀಲ್ ಅವರು ಇ-ಬಸ್ ಚಾಲಕರೊಂದಿಗೆ ನೇರವಾಗಿ ಸಂವಾದ ನಡೆಸಿ, ಬಸ್‌ಗಳ ಕಾರ್ಯಕ್ಷಮತೆ, ಚಾಲನಾ ಅನುಭವ, ಪ್ರಯಾಣಿಕರ ಪ್ರತಿಕ್ರಿಯೆ ಹಾಗೂ ಕಾರ್ಯಾಚರಣೆಯಲ್ಲಿ ಎದುರಾಗುವ ಸವಾಲುಗಳ ಕುರಿತು ಮಾಹಿತಿ ಪಡೆದರು.

ಈ ಅಧ್ಯಯನ ಭೇಟಿ ಮೂಲಕ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಗುಣಮಟ್ಟದ, ಪರಿಸರ ಸ್ನೇಹಿ ಹಾಗೂ ಆಧುನಿಕ ಸಾರ್ವಜನಿಕ ಸಾರಿಗೆ ಸೇವೆ ಜಾರಿಗೊಳಿಸಲು ಅಗತ್ಯ ಅನುಭವ ಮತ್ತು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಎಲೆಕ್ಟ್ರಿಕ್ ಬಸ್ ಸೇವೆ ಲಭ್ಯವಾಗಲಿದೆ ಎಂದು ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ.ವೈ. ಪಾಟೀಲ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button