ಅಪರಾಧ

ಬೈಕ್‌ ತೆಗೆದುಕೊಂಡು ನಾಪತ್ತೆಯಾದ ಚಾಲಕ; ಠಾಣೆಯಲ್ಲಿ ದೂರು ದಾಖಲು

₹50 ಸಾವಿರ ಮೌಲ್ಯದ ಹೋಂಡಾ ಸ್ಪ್ಲೆಂಡರ್ ಬೈಕ್‌ ಮರಳಿಸದೆ ಪರಾರಿ; ಪೊಲೀಸ್ ತನಿಖೆ ಆರಂಭ

ಕಲಬುರಗಿ, ಜು. 27: ಬೈಕ್‌ ಮಾಲೀಕರಿಂದ ವಾಹನವನ್ನು ಪಡೆದುಕೊಂಡು ಬಳಿಕ ನಾಪತ್ತೆಯಾದ ಚಾಲಕನ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಬುದ್ಧನಗರ ನಿವಾಸಿ ಕಿಶೋರ್ ಅವರ ಹೋಂಡಾ ಸ್ಪ್ಲೆಂಡರ್ ಬೈಕ್ ಅನ್ನು ಪರಿಚಯದ ಮೂಲಕ ಚಾಲಕನಾಗಿದ್ದ ಸಿಬಿಐ ಕಾಲೋನಿಯ ನಿವಾಸಿ ವಿಶ್ವನಾಥ ಎಂಬಾತ ಜೂನ್ 10ರಂದು ಬಳಸಲು ಪಡೆದುಕೊಂಡಿದ್ದಾನೆ. ಕೆಲ ದಿನಗಳ ಬಳಿಕ ಬೈಕ್ ಹಿಂತಿರುಗಿಸುವುದಾಗಿ ಹೇಳಿದ್ದರೂ, ಸುಮಾರು 15 ದಿನಗಳ ನಂತರ ಕೆಲಸಕ್ಕೂ ಹಾಜರಾಗದೆ ಸಂಪರ್ಕಕ್ಕೂ ಸಿಗದೆ ನಾಪತ್ತೆಯಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಬೈಕ್ ಮಾಲೀಕ ಕಿಶೋರ್ ಅವರು ಸ್ನೇಹಿತರೊಂದಿಗೆ ವಿಶ್ವನಾಥನ ಮನೆ ಹಾಗೂ ಸ್ವಗ್ರಾಮ ಮೇಲಕುಂದ (ಬಿ) ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಸುಮಾರು ₹50 ಸಾವಿರ ಮೌಲ್ಯದ ಹೋಂಡಾ ಸ್ಪ್ಲೆಂಡರ್ ಬೈಕ್ ಅನ್ನು ಮರಳಿಸದೇ ಪರಾರಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button