ಮನೆ ಕಳ್ಳತನ ಪ್ರಕರಣ: ೨೪ ಗಂಟೆಯೊಳಗೆ ಆರೋಪಿತನ ಬಂಧನ

ಕಲಬುರ್ಗಿ, ಸೆ.೧೦- ಜಿಲ್ಲೆಯ ರಟಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾದ ೨೪ ಗಂಟೆಗಳಲ್ಲೇ ಆರೋಪಿತನನ್ನು ಬಂಧಿಸಿದ್ದಾರೆ.
ಬಂಧಿತನಿಗೆ ನಗರದ ಆಶ್ರಯ ಕಾಲೋನಿಯ ರಾಣೇಶಪೀರ ದರ್ಗಾ ಪ್ರದೇಶದ ನಿವಾಸಿ, ಹಾಲಿ ವಸ್ತಿ ಕೋಡ್ಲಿಯ ಸುಧಾಕರ್ ತಂದೆ ತಿಪ್ಪಣ್ಣ ಪಾಣೇಗೇರ್ ಎಂದು ಗುರುತಿಸಲಾಗಿದೆ.ಬಂಧಿತ ಆರೋಪಿತನಿಂದ ಕಳ್ಳತನ ಮಾಡಲಾಗಿದ್ದ ೭,೫೦೦೦೦ರೂ.ಗಳ ಮೌಲ್ಯದ ೫೧ ಗ್ರಾಮ್ ತೂಕದ ಬಂಗಾರ ಮತ್ತು ೫,೨೦೦ರೂ.ಗಳ ಮೌಲ್ಯದ ೨೬ ಗ್ರಾಮ್ ತೂಕದ ಬೆಳ್ಳಿಯ ಆಭರಣಗಳು, ನಗದು ೫೦,೦೦೦ರೂ.ಗಳು ಸೇರಿ ಸುಮಾರು ೮,೨೦,೨೦೦ರೂ.ಗಳ ಮೌಲ್ಯದ ವಸ್ತುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ್ದ ಆಯುಧ ಜಪ್ತಿ ಪಡಿಸಿಕೊಂಡಿದ್ದಾರೆ.
ಚಿoಚೋಳಿ ಉಪ ವಿಭಾಗದ ಪೋಲಿಸ್ ಉಪ ಅಧೀಕ್ಷಕ ಸಂಗಮನಾಥ ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಕೃಷ್ಣಕುಮಾರ್ ಅವರ ನೇತೃತ್ವದಲ್ಲಿ ಪಿಎಸ್‌ಐ ಶ್ರೀಮತಿ ಶೀಲಾದೇವಿ, ಸಿಬ್ಬಂದಿಗಳಾದ ನಟರಾಜ್, ಮೋಹನರೆಡ್ಡಿ, ವಸಂತ್, ಪಾಂಡುರoಗ, ಸುನೀಲಕುಮಾರ್, ಆಕಾಶ್, ಕುಮಾರಿ ಲಕ್ಷಿö್ಮÃ ಮ್ಯಾಳೇಸಿ, ರೇವಣಸಿದ್ದಪ್ಪ ಅವರು ಯಶಸ್ವಿ ಕಾರ್ಯಾಚರಣೆ ಕೈಗೊಂಡರು.
ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಪೊಲೀಸರು ಕಳ್ಳತನಕ್ಕೆ ಸಂಬoಧಿಸಿದ ಇತರ ಅಂಶಗಳ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ತ್ವರಿತವಾಗಿ ಕಾರ್ಯಾಚರಣೆ ನಡೆಸಿ ಆರೋಪಿತನನ್ನು ಬಂಧಿಸಿ ಕಳ್ಳತನದ ವಸ್ತುಗಳನ್ನು ವಶಪಡಿಸಿಕೊಂಡ ರಟಕಲ್ ಪೊಲೀಸ್ ಠಾಣೆಯ ಸಿಬ್ಬಂದಿಯ ಕಾರ್ಯಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



