ಜಿಲ್ಲಾಸುದ್ದಿಧಾರ್ಮಿಕ
ದೇವಲ ಗಾಣಗಾಪುರಕ್ಕೆ ಆರ್. ರಘು ಕೌಟಿಲ್ಯ ಭೇಟಿದತ್ತ ಮಹಾರಾಜರ ದರ್ಶನ ಪಡೆದ ವಿಧಾನಪರಿಷತ್ ಸದಸ್ಯ

ಅಫಜಲಪುರ, ಅ.4: ದಕ್ಷಿಣ ಭಾರತದ ಕಾಶಿ ಎಂದು ಪ್ರಸಿದ್ಧವಾಗಿರುವ ಕಲಬುರಗಿ ಜಿಲ್ಲೆಯ ಪವಿತ್ರ ಕ್ಷೇತ್ರ ದೇವಲ ಗಾಣಗಾಪುರಕ್ಕೆ ವಿಧಾನಪರಿಷತ್ ಸದಸ್ಯ ಹಾಗೂ ಕರ್ನಾಟಕ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಆರ್. ರಘು ಕೌಟಿಲ್ಯ ಅವರು ಭಾನುವಾರ (ಅ.4) ಭೇಟಿ ನೀಡಿ ಶ್ರೀ ದತ್ತ ಮಹಾರಾಜರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಗಾಣಗಾಪುರಕ್ಕೆ ಆಗಮಿಸಿದ ಅವರನ್ನು ಗ್ರಾಮದ ಯುವ ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಅಫಜಲಪುರ ತಾಲೂಕಿನ ಬಿಜೆಪಿ ಮುಖಂಡ ಅವ್ವಣ್ಣ ಮ್ಯಾಕೇರಿ, ಗ್ರಾಮದ ಮುಖಂಡರಾದ ಚಿಚ್ಚೋಲ ಅರ್ಜುನಗಿ, ಭಾಗಪ್ಪ ವಡಿಗೇರಿ, ಪ್ರಿಯಾಂಕ್ ಭಟ್ ಪೂಜಾರಿ, ದಿಗಂಬರ್ ಡಾಂಗೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.



