ಜಿಲ್ಲಾಸುದ್ದಿಧಾರ್ಮಿಕ

ಜೈಲಿನಿಂದ ಬಿಡುಗಡೆಯ ಬಳಿಕ ಮೊದಲ ಬಾರಿ ಗಾಣಗಾಪುರಕ್ಕೆ ವಿನಯ ಕುಲಕರ್ಣಿ ಭೇಟಿ

ವರದಿ: ಮಲ್ಲಿಕ ಪಟೇಲ.

ಅಫಜಲಪುರ, ಅ.5: ಧಾರವಾಡ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯ ಕುಲಕರ್ಣಿ ಅವರು ಸೋಮವಾರ ಕುಟುಂಬ ಸಮೇತರಾಗಿ ದೇವಲ ಗಾಣಗಾಪುರಕ್ಕೆ ಭೇಟಿ ನೀಡಿ ದತ್ತ ಮಹಾರಾಜರ ದರ್ಶನ ಪಡೆದರು.

ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ರುದ್ರಾಭಿಷೇಕ ಸೇವೆ ಸಲ್ಲಿಸಿದ ಅವರು, ಕ್ಷೇತ್ರದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಿದರು.ಜೈಲಿನಿಂದ ಬಿಡುಗಡೆಯಾದ ಬಳಿಕ ಇದೇ ಮೊದಲ ಬಾರಿಗೆ ವಿನಯ ಕುಲಕರ್ಣಿ ಅವರು ಗಾಣಗಾಪುರಕ್ಕೆ ಭೇಟಿ ನೀಡಿದರು. ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಮುಖ್ಯ ಅರ್ಚಕರು ದತ್ತ ಮಹಾರಾಜರ ಭಾವಚಿತ್ರ ನೀಡಿ ಅವರನ್ನು ಗೌರವಿಸಿದರು.

ದೇವಲ ಗಾಣಗಾಪುರವು ದತ್ತಾತ್ರೇಯರ ಮೂರನೇ ಅವತಾರವೆಂದು ನಂಬಲಾಗಿರುವ ಶ್ರೀ ನರಸಿಂಹ ಸರಸ್ವತಿ ಅವರ ಪವಿತ್ರ ಕ್ಷೇತ್ರವಾಗಿದೆ. ಧಾರ್ಮಿಕ ಮಹತ್ವ ಹೊಂದಿರುವ ಈ ಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಹಾಗೂ ಗಣ್ಯರು ಆಗಮಿಸಿ ದರ್ಶನ ಪಡೆಯುತ್ತಾರೆ.

ಅದೇ ರೀತಿ ಸೋಮವಾರ ವಿನಯ ಕುಲಕರ್ಣಿ ಅವರು ಕುಟುಂಬ ಸಮೇತರಾಗಿ ಗಾಣಗಾಪುರಕ್ಕೆ ಆಗಮಿಸಿ ದತ್ತ ಮಹಾರಾಜರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button