ಬೀದರ್‌ನಲ್ಲಿ ಇಂದು ಕಿಂಗ್ ಆಫ್ ಹೆವೆನ್ ಚರ್ಚ್ ವಾರ್ಷಿಕೋತ್ಸವ ಆಚರಣೆ
ಆಗಸ್ಟ್ 6ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ; ಸಾರ್ವಜನಿಕರಿಗೆ ಭಾಗವಹಿಸುವಂತೆ ಆಹ್ವಾನ

ಬೀದರ್, ಆ.5: ನಗರದ ಜಹೀರಾಬಾದ್ ರಸ್ತೆಯ ಬಿದ್ರಿ ವೃತ್ತ ಸಮೀಪದ ಪಟೇಲ್ ಫಂಕ್ಷನ್ ಹಾಲ್‌ನಲ್ಲಿ ಕಿಂಗ್ ಆಫ್ ಹೆವೆನ್ ಇಂಟರ್‌ನ್ಯಾಷನಲ್ ಚರ್ಚ್ ವತಿಯಿಂದ ಆಗಸ್ಟ್ 6ರಂದು ವಾರ್ಷಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಚರ್ಚ್ ಸಂಸ್ಥಾಪಕ ಡಾ. ಮನೋಜ್ ಪೌಲ್ ತಿಳಿಸಿದ್ದಾರೆ.
ವಾರ್ಷಿಕೋತ್ಸವದ ಅಂಗವಾಗಿ ದಿನವಿಡೀ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಿಗ್ಗೆ 9 ಗಂಟೆಗೆ ಪಾಸ್ಟರ್‌ಗಳ ಕಾರ್ಯಾಗಾರ, ಮಧ್ಯಾಹ್ನ 12 ಗಂಟೆಗೆ ಯುವಜನರ ಕಾರ್ಯಾಗಾರ ಹಾಗೂ ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಡಾ. ಕಾಂಚನಾ ಮಿತ್ತಲ್, ತುಮಕೂರಿನ ವಿ. ಮೋನಿಕಾ, ಆಕಾಶ್ ಮಿತ್ತಲ್, ಅಭಿಷೇಕ್ ಮಿತ್ತಲ್ ಹಾಗೂ ವಿ. ಸೋನಿಕಾ ಅವರು ಉಪನ್ಯಾಸ ನೀಡಲಿದ್ದಾರೆ.
ಪಾಸ್ಟರ್‌ಗಳು, ಯುವಜನರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಡಾ. ಮನೋಜ್ ಪೌಲ್ ಮನವಿ ಮಾಡಿದ್ದಾರೆ.



