ಜಿಲ್ಲಾಸುದ್ದಿ

ಕಲಬುರಗಿಯಲ್ಲಿ ನಾಳೆ ಕನ್ನಡ ನುಡಿಹಬ್ಬ: ಭವ್ಯ ಮೆರವಣಿಗೆ, ಗಣ್ಯರ ಉಪಸ್ಥಿತಿ

ಕಲಬುರಗಿ, ನ.14: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಸೂಪರ್ ಮಾರ್ಕೆಟ್‌ನಲ್ಲಿ ನವೆಂಬರ್ 16ರಂದು ಸಂಜೆ 6 ಗಂಟೆಗೆ ರಾಜ್ಯೋತ್ಸವ ಸಂಭ್ರಮದ ಕನ್ನಡ ನುಡಿಹಬ್ಬ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 3 ಗಂಟೆಗೆ ನಗರದ ನಗರೇಶ್ವರ ಶಾಲೆಯಿಂದ ಸೂಪರ್ ಮಾರ್ಕೆಟ್‌ನ ಕಾಮತ್ ಹೋಟೆಲ್‌ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ ಎಂದು ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ವಿಭಾಗೀಯ ಉಸ್ತುವಾರಿ ಮಲ್ಲಿಕಾರ್ಜುನ ಎಸ್. ಸಾರವಾಡ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ರಾಷ್ಟ್ರಸಂತ ಹವಾ ಮಲ್ಲಿನಾಥ ಮಹಾರಾಜರು, ಚಿ. ದೊಡ್ಡಪ್ಪ ಅಪ್ಪ, ಕರ್ನಾಟಕ ವಕ್ಫ್ ಮಂಡಳಿ ಅಧ್ಯಕ್ಷ ಹಾಗೂ ಖ್ವಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಡಾ. ಸೈಯದ್ ಮೊಹಮ್ಮದ್ ಅಲಿ ಅಲ್ ಹುಸೇನಿ, ಬುದ್ಧ ವಿಹಾರದ ಸುನಂದೋ ಭಂತೇಜಿ, ಗುರುನಾನಕ ಮಠದ ದೀಪಸಿಂಗ್‌ಜಿ ಹಾಗೂ ಸೇಂಟ್ ಮೇರಿ ಚರ್ಚ್‌ನ ಜೋಸೆಫ್ ಪ್ರವೀಣ್ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ರಾಜ್ಯದ ಸಣ್ಣ ನೀರಾವರಿ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಜಯ್ ಧರ್ಮಸಿಂಗ್ ಮತ್ತು ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಹಾಗೂ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಉದ್ಘಾಟಿಸಲಿದ್ದಾರೆ. ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಅಧ್ಯಕ್ಷತೆ ವಹಿಸಲಿದ್ದಾರೆ.

ಶಾಸಕರಾದ ಬಸವರಾಜ ಮತ್ತಿಮೂಡ ಮತ್ತು ಅಲ್ಲಮಪ್ರಭು ಪಾಟೀಲ ಜ್ಯೋತಿ ಬೆಳಗಿಸಲಿದ್ದಾರೆ. ಕನ್ನಡಾಂಬೆಯ ಭಾವಚಿತ್ರಕ್ಕೆ ಬಿಜೆಪಿ ನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ ಹಾಗೂ ಕಾಂಗ್ರೆಸ್ ಮುಖಂಡ ನೀಲಕಂಠರಾವ್ ಮೂಲಗೆ ಪೂಜೆ ಸಲ್ಲಿಸಲಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ನಿತಿನ್ ಗುತ್ತೇದಾರ್ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಅವರು ಗೌರವ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಗಣ್ಯರ ಉಪಸ್ಥಿತಿ

ಮುಖ್ಯ ಅತಿಥಿಗಳಾಗಿ ಡಾ. ಕಿರಣ್ ದೇಶಮುಖ್, ಬಾಲರಾಜ್ ಗುತ್ತೇದಾರ್, ಮೇಯರ್ ಅಜಮಲ್ ಗೋಲಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ, ಅಂಬರೀಷ್ ಬಿಲ್ಲವ್, ಇಲಿಯಾಸ್ ಸೇಠ್ ಭಗವಾನ್, ಅಲಂದಾರ್ ರೈದಿ, ಹರ್ಷಾನಂದ ಗುತ್ತೇದಾರ್, ಸಂತೋಷ್ ಬಿಲಗುಂದಿ, ಡಾ. ಫಾರೂಕ್ ಮನೂರ್, ಡಾ. ಸಂಜೀವ್ ಪಾಟೀಲ, ದಿವ್ಯಾ ಹಾಗರಗಿ, ಆರ್. ರುದ್ರಯ್ಯ, ಸಿದ್ದಾಮಯ್ಯ ಎಸ್. ಹಿರೇಮಠ, ಜಸ್ವೀರ್‌ಸಿಂಗ್, ರಾಕೇಶ್ ವಾಡೇಕರ್, ರೋಹಿತ್ ಮೈಲಾಪುರ, ಶ್ಯಾಮ್ ಖಂಡೇಲ್ವಾಲ್, ಶಾಂತವೀರ ಎಂ. ಬಡಿಗೇರ್, ಸಂಪತಕುಮಾರ ವಳಕೇರಿ, ಸಮೀರ್ ಭಗವಾನ್ ಹಾಗೂ ಶರಣಗೌಡ ಪಾಟೀಲ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಆರ್. ಮುನಿಸ್ವಾಮಿ, ರಜತ್ ಗಗನರಾಜ್, ವಿಜಯಕುಮಾರ ಮುಗದಂಪೂರ, ಶಿವಕುಮಾರ ಯಾದವ್, ವಿಶ್ವನಾಥ ನಾಯಕ್, ಸಂಗಮೇಶ ಸಿದ್ದನಗೌಡ ದಾಶಾಳ್, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಸವರಾಜ ಜ್ಯೋತಿ ಇಮಡಾಪೂರ ಹಾಗೂ ಸುನೀಲಕುಮಾರ ಸಕಪಾಳ್ ಆಗಮಿಸಲಿದ್ದಾರೆ ಎಂದು ಮಲ್ಲಿಕಾರ್ಜುನ ಸಾರವಾಡ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್ಯ ಸಿಂಧೆ, ಸೂರ್ಯಕಾಂತ ಅಂಬಾಡಿ, ಶ್ರೀಕಾಂತ ರೆಡ್ಡಿ, ವಿಠಲ ಕ್ಷೇತ್ರಿ, ಶಿವಕುಮಾರ ವರ್ಮಾ, ಸೋಮರೆಡ್ಡಿ ಮಲ್ಲಾಬಾದ್ ಮತ್ತಿತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button