ಜಿಲ್ಲಾಸುದ್ದಿ

ಕಲಬುರ್ಗಿಯಲ್ಲಿ ಜುಲೈ ೭ಕ್ಕೆ ಜಗದ್ಗುರು ರೇಣುಕಸಿದ್ದೇಶ್ವರ ಮಾಲಾಧಾರಿಗಳ ರಜತ ಮಹೋತ್ಸವ

ಕಲಬುರ್ಗಿ, ಜು.೩- ನಗರದ ಮಕ್ತಂಪುರದ ಬಸವಣ್ಣ ದೇವಸ್ಥಾನದಲ್ಲಿ ಜುಲೈ ೭ರಂದು ಸಂಜೆ ಆರು ಗಂಟೆಗೆ ಶ್ರೀ ಜಗದ್ಗುರು ರೇಣುಕಸಿದ್ದೇಶ್ವರ ಮಾಲಾಧಾರಿಗಳ ರಜತ ಮಹೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪಾಳಾದ ಡಾ. ಗುರುಮೂರ್ತಿ ಶಿವಾಚಾರ್ಯರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿವ್ಯ ಸಾನಿಧ್ಯವನ್ನು ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಡಾ.ವೀರಸೋಮೇರ್ಶವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಅಧ್ಯಕ್ಷತೆಯನ್ನು ಸರಡಗಿಯ ರೇವಣಸಿದ್ಧ ಶಿವಾಚಾರ್ಯರು ವಹಿಸುವರು. ಹೊನ್ನಕಿರಣಗಿಯ ಚಂದ್ರಗುAಡ ಶಿವಾಚಾರ್ಯರು, ಸ್ಟೇಷನ್ ಬಬಲಾದ್‌ನ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಕ್ತಂಪುರ ಗದ್ದುಗೆ ಮಠದ ಚರಲಿಂಗ ಮಹಾಸ್ವಾಮಿಗಳು ಉಪಸ್ಥಿತಿ ಇರುವರು ಎಂದರು.

ಅತಿಥಿಗಳಾಗಿ ಬಸವಣ್ಣ ಸೇವಾ ಸಮಿತಿ ಅಧ್ಯಕ್ಷ ಶಾಂತಕುಮಾರ್ ಬಿ. ಬಿಲಗುಂದಿ, ಸ್ವಕುಳ ಸಾಳಿ ಸಮಾಜದ ಅಧ್ಯಕ್ಷ ನಾರಾಯಣ ಎಸ್. ಶಿಂಗಾಡೆ, ಉದ್ಯಮಿ ಶಿವಶರಣಪ್ಪ ಸೀರಿ, ಮಾಜಿ ಮಹಾಪೌರ ಧರ್ಮಪ್ರಕಾಶ್ ಪಾಟೀಲ್, ಡಾ. ಜಗನ್ನಾಥ ಬಿ. ಬಿಜಪೂರ್, ಶಿವಶಂಕರ್ ಎಸ್. ಹೊಸಗೌಡ, ನಿವೃತ್ತ ಪ್ರಾಚಾರ್ಯ ಸಂಗಣ್ಣ ಧೂಳಗುಂಡಿ, ಸಿದ್ರಾಮಪ್ಪ ಎಸ್. ಪಾಟೀಲ್ (ಬಾಬುಗೌಡ) ಅವರು ಆಗಮಿಸುವರು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ರೇಣುಕಾನಂದ ಚೌಧರಿ, ವಿನೋದ್ ದುದಗಿ, ಸಿದ್ರಾಮಪ್ಪ ಆಲಗೂಡಕರ್, ರಾಜು ಹೆಬ್ಬಾಳ್ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button