ಸಮಾಜಸಾಂಸ್ಕೃತಿಕ

ಕಲಬುರಗಿಯಲ್ಲಿ ಅ.25ರಂದು ವೀರಶೈವ ಲಿಂಗಾಯತರ ರಾಜ್ಯಮಟ್ಟದ ಬೃಹತ್ ವಧು-ವರರ ಸಮಾವೇಶ

ವೀರಶೈವ ಕಲ್ಯಾಣ ಮಂಟಪದಲ್ಲಿ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕಾರ್ಯಕ್ರಮ

ಕಲಬುರಗಿ, ಅ.22: ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ್ 25ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳಿಗಾಗಿ ರಾಜ್ಯಮಟ್ಟದ ಬೃಹತ್ ವಧು-ವರರ ಸಮಾವೇಶ-2026 ಆಯೋಜಿಸಲಾಗಿದೆ ಎಂದು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಶರಣಬಸವೇಶ್ವರ ಸಂಸ್ಥಾನದ ಫ್ಯಾಮಿಲಿ ಟ್ರಸ್ಟ್ ಹಾಗೂ ಭಾರತ ಕಲ್ಯಾಣ ಸಂಸ್ಕೃತಿ ಸೇವಾ ಟ್ರಸ್ಟ್‌ಗಳ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ. ಸಮಾಜದ ವಧು-ವರರಿಗೆ ಸೂಕ್ತ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಮಾವೇಶವನ್ನು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮತ್ತು ಧರ್ಮರಾಜ ಕಾಡಾದಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಿರಂಜೀವಿ ದೊಡ್ಡಪ್ಪ ಅಪ್ಪ, ಡಾ. ದಾಕ್ಷಾಯಿಣಿ ಎಸ್. ಅಪ್ಪ, ಮುರುಘೇಂದ್ರ ಮಹಾಸ್ವಾಮೀಜಿ, ಚನ್ನವೀರ ಶಿವಾಚಾರ್ಯರು, ಡಾ. ಚನ್ನಮಲ್ಲ ಶಿವಾಚಾರ್ಯರು, ಡಾ. ಅಪ್ಪಾರಾವ್ ದೇವಿ ಮುತ್ಯಾ, ಹವಾ ಮಲ್ಲಿನಾಥ ಮಹಾರಾಜರು ಹಾಗೂ ಡಾ. ರಾಜಶೇಖರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಸಂತೋಷ ಸುಗಂಧಿ, ಶಾಸಕ ಶರಣಬಸಪ್ಪ ದರ್ಶನಾಪುರ, ಸಂತೋಷ ಬಿಲಗುಂದಿ, ವಿಲಾಸವತಿ ಖೂಬಾ, ಗೌರಿ ಚಿಚಕೋಟಿ, ಡಾ. ಎಸ್.ಬಿ. ಕಾಮರೆಡ್ಡಿ ಹಾಗೂ ಶಿವಾನಂದ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅರುಣಕುಮಾರ ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲ್ಯಾಣರಾವ್ ಪಾಟೀಲ, ವಿರೂಪಾಕ್ಷಯ್ಯ ಮಠಪತಿ, ಶ್ರೀಶೈಲ ಪೂಜಾರ, ಸಂಗಮೇಶ ನಾಗನಹಳ್ಳಿ, ವಿನೋದ್ ಪಾಟೀಲ ಸರಡಗಿ, ಶಶಿಕಾಂತ ಪಾಟೀಲ ಚಿತ್ತಾಪುರ, ಸುಭಾಷ್ ಬಿಜಾಪುರ, ರಾಜಕುಮಾರ ಕೋಟಿ, ಮಂಜು ರೆಡ್ಡಿ, ವೀರಣ್ಣ ಹೊನ್ನಳ್ಳಿ ಹಾಗೂ ವಿವೇಕ್ ಬಿರಾದಾರ ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button