ಹಿಂದೂ ಮಹಾಗಣಪತಿ ದರ್ಶನ ಪಡೆದ ಕೊಪ್ಪಳ ಗವಿಮಠದ ಶ್ರೀಗಳು
ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಭೇಟಿ; ವಿಶೇಷ ಪೂಜೆ ಸಲ್ಲಿಸಿದ ಸ್ವಾಮೀಜಿ

ಕಲಬುರಗಿ, ಸೆ. 28: ನಗರದ ಕೋಟೆ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ಕೇದಾರನಾಥ ಮಾದರಿಯ ಭವ್ಯ ಮಂದಿರಕ್ಕೆ ಕೊಪ್ಪಳ ಗವಿಮಠದ ಪೂಜ್ಯ ಶ್ರೀಗಳು ಭೇಟಿ ನೀಡಿ ಹಿಂದೂ ಮಹಾಗಣಪತಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಗಳು ಮಹಾಗಣಪತಿಗೆ ಆರತಿ ನೆರವೇರಿಸಿ ಭಕ್ತರೊಂದಿಗೆ ದೇವರ ಆಶೀರ್ವಾದ ಪಡೆದರು. ಗಣೇಶೋತ್ಸವದ ಅಂಗವಾಗಿ ಹಿಂದೂ ಮಹಾಗಣಪತಿ ಸಮಿತಿಯಿಂದ ನಿರ್ಮಿಸಲಾಗಿರುವ ಕೇದಾರನಾಥ ಮಾದರಿಯ ಮಂದಿರ ಹಾಗೂ ವಿಶೇಷ ಅಲಂಕಾರವನ್ನು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಮಲ್ಲ ಶ್ರೀಗಳು, ಗೋಳಾ, ತೋಳನೂರ ಹಾಗೂ ನರೋಣಾ ಶ್ರೀಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಶಾಸಕ ಬಸವರಾಜ ಮತ್ತಿಮಡು, ಸಮಾಜ ಸೇವಕಿ ಜಯಶ್ರೀ ಮತ್ತಿಮಡು ಸೇರಿದಂತೆ ಹಲವರು ಭಾಗವಹಿಸಿ ಮಹಾಗಣಪತಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸಮಿತಿಯ ಅಧ್ಯಕ್ಷ ಶ್ರೀಮಂತ ರಾಜು ನವಲದಿ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಗಂಗಾ, ಸಂಜೀವ್ ಗುಪ್ತಾ, ಕೋಶಾಧ್ಯಕ್ಷ ಶ್ರೀಶೈಲ ಮೂಲಗೆ, ಸದಸ್ಯರಾದ ಶಿವರಾಜ ಸಂಗೋಳಗಿ, ಅಶ್ವಿನ್ ಕುಮಾರ್, ಪ್ರಶಾಂತ ಗುಡ್ಡ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.



