ಕಲಬುರಗಿಯಲ್ಲಿ ನಾಳೆ ಕೆಎಸ್ಸಿಎ ಅಂಡರ್-23 ಕ್ರಿಕೆಟ್ ಆಯ್ಕೆ ಪ್ರಕ್ರಿಯೆ
ಜುಲೈ 23ರಂದು ಕೆಬಿಎನ್ ಮೈದಾನದಲ್ಲಿ ಟ್ರಯಲ್ಸ್; ಅರ್ಹ ಆಟಗಾರರಿಗೆ ಭಾಗವಹಿಸಲು ಅವಕಾಶ

ಬೀದರ್, ಜು.22: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ರಾಯಚೂರು ವಲಯದ 2026–27ನೇ ಸಾಲಿನ ಅಂಡರ್-23 ಪುರುಷರ ಕ್ರಿಕೆಟ್ ತಂಡದ ಆಯ್ಕೆ ಪ್ರಕ್ರಿಯೆ ಜುಲೈ 23ರಂದು ಬೆಳಿಗ್ಗೆ 8 ಗಂಟೆಗೆ ಕಲಬುರಗಿ ನಗರದ ಕೆಬಿಎನ್ ಮೈದಾನದಲ್ಲಿ ನಡೆಯಲಿದೆ.
2026–27ನೇ ಸಾಲಿನ ಅಂಡರ್-23 ವಿಭಾಗಕ್ಕೆ ಅರ್ಹ ಆಟಗಾರರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಸೆಪ್ಟೆಂಬರ್ 1, 2003 ಅಥವಾ ಅದರ ನಂತರ ಜನಿಸಿದ ಆಟಗಾರರು ಅರ್ಹರಾಗಿದ್ದು, ಸೆಪ್ಟೆಂಬರ್ 1, 2007 ಅಥವಾ ಅದರ ನಂತರ ಜನಿಸಿದ ಅಂಡರ್-19 ಆಟಗಾರರಿಗೆ ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆಗೆ ಆಗಮಿಸುವ ಆಟಗಾರರು ಜನ್ಮ ದಿನಾಂಕ ಪ್ರಮಾಣಪತ್ರ, ಆಧಾರ್ ಕಾರ್ಡ್, ಮೂರು ವರ್ಷದ ನಿವಾಸದ ದಾಖಲೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ಎಲ್ಲಾ ಆಟಗಾರರು ಬಿಳಿ ಕ್ರಿಕೆಟ್ ಉಡುಪಿನಲ್ಲೇ ಹಾಜರಾಗಬೇಕು. ಪ್ರಯಾಣ ಹಾಗೂ ಇತರೆ ವೆಚ್ಚಗಳನ್ನು ಆಟಗಾರರೇ ಭರಿಸಬೇಕಾಗುತ್ತದೆ. ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕೆಎಸ್ಸಿಎ ರಾಯಚೂರು ವಲಯದ ಸಂಚಾಲಕ ಕುಶಾಲ್ ಪಾಟೀಲ್ ಗಾದಗಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಕೋ-ಆರ್ಡಿನೇಟರ್ ಪ್ರಕಾಶ್ ಅಯ್ಯಳ್ಳ (ಮೊ. 98453 76646) ಅಥವಾ ಕಚೇರಿ ಸಹಾಯಕ ಅರವಿಂದ್ ಕುಮಾರ್ (ಮೊ. 63626 30931) ಅವರನ್ನು ಸಂಪರ್ಕಿಸಬಹುದು ಎಂದು ಕೆಎಸ್ಸಿಎ ರಾಯಚೂರು ವಲಯದ ಮಾಧ್ಯಮ ಸಂಯೋಜಕ ಅನೀಲಕುಮಾರ್ ದೇಶಮುಖ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



