ಇನ್ನರ್ ವೀಲ್ ಜಿಲ್ಲಾ 316 ಅಧ್ಯಕ್ಷೆಯಾಗಿ ಮಂಜುಳಾ ಮೂಲಗೆ ಅಧಿಕಾರ ಸ್ವೀಕಾರ
2026–27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ; ಮಹಿಳಾ ಸಬಲೀಕರಣಕ್ಕೆ ಆದ್ಯತೆ

ಬೀದರ್, ಜು.22: ಇನ್ನರ್ ವೀಲ್ ಜಿಲ್ಲಾ 316ರ ನೂತನ ಅಧ್ಯಕ್ಷೆಯಾಗಿ ಮಂಜುಳಾ ಮೂಲಗೆ ಅಧಿಕಾರ ಸ್ವೀಕರಿಸಿದರು. ಪ್ರತಾಪನಗರದ ವಿಆರ್ಸಿ ವೆಡ್ಡಿಂಗ್ ಸೆಂಟರ್ನಲ್ಲಿ ನಡೆದ ಇನ್ನರ್ ವೀಲ್ ಜಿಲ್ಲಾ 316ರ 42ನೇ ಜಿಲ್ಲಾ ಸಭೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಇನ್ನರ್ ವೀಲ್ ಅಸೋಸಿಯೇಷನ್ ಅಧ್ಯಕ್ಷೆ ವಿನುತಾ ಹರೀಶ್ ಅವರು ಮಂಜುಳಾ ಮೂಲಗೆ ಹಾಗೂ 2026–27ನೇ ಸಾಲಿನ ನೂತನ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಅಧಿಕಾರ ಹಸ್ತಾಂತರಿಸಿದರು.
ಮಂಜುಳಾ ಮೂಲಗೆ ಅವರು ಇನ್ನರ್ ವೀಲ್ ಜಿಲ್ಲಾ 316ರ ಇತಿಹಾಸದಲ್ಲಿ ಜಿಲ್ಲೆಯ ಎರಡನೇ ಮಹಿಳಾ ಅಧ್ಯಕ್ಷೆಯಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಸುಮಾರು ನಾಲ್ಕು ದಶಕಗಳ ಹಿಂದೆ ಗುರುಮ್ಮ ಸಿದ್ದಾರೆಡ್ಡಿ ಅವರು ಈ ಹುದ್ದೆಯನ್ನು ಅಲಂಕರಿಸಿದ್ದರು.
ನೂತನ ಪದಾಧಿಕಾರಿಗಳಾಗಿ ಜಿಲ್ಲಾ ಉಪಾಧ್ಯಕ್ಷೆಯಾಗಿ ಡಾ. ಶೋಭಾ ಗೌಡರ್, ಕಾರ್ಯದರ್ಶಿಯಾಗಿ ಡಾ. ಪಾರ್ವತಿ ಪಲೋಟಿ, ಖಜಾಂಚಿಯಾಗಿ ಶ್ವೇತಾ ರೆಡ್ಡಿ, ವಿಸ್ತರಣಾ ಸೇವಾ ಸಂಯೋಜಕಿಯಾಗಿ ಡಾ. ಜ್ಯೋತಿ ತೆಗನೂರು, ಸಂಪಾದಕಿಯಾಗಿ ಎಸ್.ವಿ. ರಮ್ಯಾ ಹಾಗೂ ಅಂತರರಾಷ್ಟ್ರೀಯ ಸೇವಾ ಸಂಯೋಜಕಿಯಾಗಿ ಡಾ. ಶೋಭಾ ಅಧಿಕಾರ ಸ್ವೀಕರಿಸಿದರು.
ಸಮಾರಂಭದಲ್ಲಿ ಮಾತನಾಡಿದ ವಿನುತಾ ಹರೀಶ್ ಅವರು ಇನ್ನರ್ ವೀಲ್ ಕ್ಲಬ್ನ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಅಧ್ಯಕ್ಷೆ ಮಂಜುಳಾ ಮೂಲಗೆ ಅವರು 2026–27ನೇ ಸಾಲಿನಲ್ಲಿ ಮಹಿಳಾ ಸಬಲೀಕರಣ, ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ ಹಾಗೂ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀನಾ ಸೇನನ್ ವಹಿಸಿದ್ದರು. ಸಹಾಧ್ಯಕ್ಷೆ ಪ್ರೇಮಿಲಾ ಗುತ್ತಿ, ಕಾರ್ಯದರ್ಶಿ ನತಾಶಾ, ಖಜಾಂಚಿ ಸುಜಾತಾ ಕಾಮಶೆಟ್ಟಿ, ಇನ್ನರ್ ವೀಲ್ ಕ್ಲಬ್ ಆಫ್ ಬೀದರ್ ಅಧ್ಯಕ್ಷೆ ವೇದಾ ಸಿಂಧೋಲ್, ಕಾರ್ಯದರ್ಶಿ ಶೀಲಾ ಮಾಳಗೆ, ಮಾಜಿ ಅಧ್ಯಕ್ಷೆ ಸುನೇನಾ ಗುತ್ತಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ 400ಕ್ಕೂ ಹೆಚ್ಚು ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.



