ಕ್ರೀಡೆ

ಸ್ಪೇನ್ ವಿಶ್ವಕಪ್ ಸಂಭ್ರಮದಲ್ಲಿ ರಾಜನನ್ನು ಅಪ್ಪಿಕೊಂಡ ಲಮಿನ್ ಯಮಾಲ್; ವೈರಲ್ ಆದ ‘ಜೀರೋ ಚಿಲ್’ ಕ್ಷಣ

ರಾಜಮನೆತನದ ಔಪಚಾರಿಕತೆಯನ್ನು ಮೀರಿ ಸ್ಪೇನ್ ರಾಜ ಫೆಲಿಪೆ VI ಅವರನ್ನು ಅಪ್ಪಿಕೊಂಡ ಯುವ ತಾರೆ ಯಮಾಲ್

ಮ್ಯಾಡ್ರಿಡ್, ಜು.21: ಫಿಫಾ ವಿಶ್ವಕಪ್ 2026 ಪ್ರಶಸ್ತಿಯನ್ನು ಗೆದ್ದ ಸಂಭ್ರಮದಲ್ಲಿರುವ ಸ್ಪೇನ್ ತಂಡದ ಯುವ ಫುಟ್ಬಾಲ್ ತಾರೆ ಲಮಿನ್ ಯಮಾಲ್ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿದ್ದಾರೆ. ವಿಶ್ವಕಪ್ ವಿಜಯದ ಹಿನ್ನೆಲೆಯಲ್ಲಿ ಸ್ಪೇನ್ ರಾಜ ಫೆಲಿಪೆ VI ಆಯೋಜಿಸಿದ್ದ ವಿಶೇಷ ಅಭಿನಂದನಾ ಸಮಾರಂಭದಲ್ಲಿ ಯಮಾಲ್ ತೋರಿದ ಆತ್ಮೀಯ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ಪೇನ್ ಆಟಗಾರರು ರಾಜಮನೆತನದ ಸದಸ್ಯರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸುವ ವೇಳೆ, ಬಹುತೇಕ ಎಲ್ಲ ಆಟಗಾರರು ಸಂಪ್ರದಾಯದಂತೆ ರಾಜ ಫೆಲಿಪೆ VI ಅವರೊಂದಿಗೆ ಕೈಕುಲುಕಿ ಕೆಲ ಕ್ಷಣ ಮಾತುಕತೆ ನಡೆಸಿದರು. ಆದರೆ ಲಮಿನ್ ಯಮಾಲ್ ಮಾತ್ರ ಆ ಔಪಚಾರಿಕತೆಯನ್ನು ಮೀರಿ ರಾಜರನ್ನು ಆತ್ಮೀಯವಾಗಿ ಅಪ್ಪಿಕೊಂಡರು.

ಯಮಾಲ್ ಅವರ ಈ ಸಹಜ ಹಾಗೂ ಮುಕ್ತ ನಡೆ ಸಮಾರಂಭದ ಅತ್ಯಂತ ಚರ್ಚಿತ ಕ್ಷಣವಾಗಿ ಪರಿಣಮಿಸಿದ್ದು, ಅದರ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅಭಿಮಾನಿಗಳು ಇದನ್ನು “ಜೀರೋ ಚಿಲ್” ಕ್ಷಣ ಎಂದು ಬಣ್ಣಿಸುತ್ತಿದ್ದು, ಯುವ ಆಟಗಾರನ ಸರಳತೆ ಮತ್ತು ಆತ್ಮವಿಶ್ವಾಸವನ್ನು ಶ್ಲಾಘಿಸುತ್ತಿದ್ದಾರೆ.

ವಿಶ್ವಕಪ್ ಗೆಲುವಿನ ಬಳಿಕ ದೇಶಾದ್ಯಂತ ಸಂಭ್ರಮಾಚರಣೆ ನಡೆಯುತ್ತಿರುವ ಸಂದರ್ಭದಲ್ಲಿ, ಲಮಿನ್ ಯಮಾಲ್ ಅವರ ಈ ವಿಶಿಷ್ಟ ನಡೆ ಸ್ಪೇನ್‌ನ ಐತಿಹಾಸಿಕ ವಿಜಯದ ಮತ್ತೊಂದು ಸ್ಮರಣೀಯ ಕ್ಷಣವಾಗಿ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button