ಜಿಲ್ಲಾಸುದ್ದಿ

26ನೇ ವರ್ಷದ ಅಮ್ಮ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಕಲಬುರಗಿ, ಅ. 6: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಪ್ರತಿಷ್ಠಿತ ಅಮ್ಮ ಪ್ರಶಸ್ತಿಯು ಈ ಬಾರಿ 26ನೇ ವರ್ಷದ ಸಂಭ್ರಮದಲ್ಲಿದ್ದು, 2025 ಹಾಗೂ 2026ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಕೃತಿಗಳನ್ನು ಪ್ರಶಸ್ತಿಗಾಗಿ ಆಹ್ವಾನಿಸಲಾಗಿದೆ ಎಂದು ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಪತ್ರಕರ್ತ ಹಾಗೂ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ಸ್ಮರಣಾರ್ಥವಾಗಿ ಸ್ಥಾಪಿಸಿರುವ ಪ್ರತಿಷ್ಠಾನದ ವತಿಯಿಂದ ಕಳೆದ 25 ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಮ್ಮ ಪ್ರಶಸ್ತಿಯನ್ನು ನಿರಂತರವಾಗಿ ನೀಡಲಾಗುತ್ತಿದೆ. ಇದೀಗ ಪ್ರಶಸ್ತಿಯ 26ನೇ ವರ್ಷದ ಸಂಭ್ರಮ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ ಕಾವ್ಯ, ಕಥೆ, ನಾಟಕ, ಕಾದಂಬರಿ ಹಾಗೂ ಲೇಖನ ಸಂಕಲನ ಪ್ರಕಾರಗಳ ಕೃತಿಗಳನ್ನು ಕಳುಹಿಸಬಹುದಾಗಿದೆ. ಆಸಕ್ತರು ತಾವು ಪ್ರಕಟಿಸಿರುವ ಕೃತಿಗಳ ಎರಡು ಪ್ರತಿಗಳನ್ನು ಪ್ರಶಸ್ತಿ ಆಯ್ಕೆಗಾಗಿ ಸಲ್ಲಿಸಬೇಕು.

ಆಯ್ಕೆಯಾಗುವ ಐದು ಕೃತಿಗಳಿಗೆ ತಲಾ ₹5,000 ನಗದು ಬಹುಮಾನ, ಗೌರವದ ಕಾಣಿಕೆ ಹಾಗೂ ತೊಗರಿ ಧಾನ್ಯದೊಂದಿಗೆ ಸತ್ಕರಿಸಲಾಗುವುದು. ಪ್ರಶಸ್ತಿಗೆ ಕೃತಿಗಳನ್ನು ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನವಾಗಿದೆ ಎಂದು ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.

ಕೃತಿಗಳನ್ನು ಶ್ರೀಮತಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್, ಸಂಚಾಲಕಿ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನ, ‘ಅಮ್ಮ ನಿಲಯ’, ರಾಮಚಂದ್ರ ಲೇಔಟ್, ಪಿಡಬ್ಲ್ಯುಡಿ ಕಚೇರಿ ಹತ್ತಿರ, ಸೇಡಂ–585222, ಕಲಬುರಗಿ ಜಿಲ್ಲೆ ವಿಳಾಸಕ್ಕೆ ಕಳುಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ 9731666052 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button