ಜಿಲ್ಲಾಸುದ್ದಿ
ಅಂಬಲಗಾದಲ್ಲಿ ಕರಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವ

ಕಮಲಾಪುರ, ಸೆ.22: ತಾಲ್ಲೂಕಿನ ಅಂಬಲಗಾ ಗ್ರಾಮದಲ್ಲಿ ಶ್ರೀ ಕರಲಿಂಗೇಶ್ವರ ಪಲ್ಲಕ್ಕಿ ಮಹೋತ್ಸವವು ಭಕ್ತಿ ಹಾಗೂ ಸಂಭ್ರಮದಿಂದ ಅದ್ಧೂರಿಯಾಗಿ ನಡೆಯಿತು.
ಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಭಜನೆ, ಡೊಳ್ಳು, ಪುರವಂತಿಕೆ ಸೇರಿದಂತೆ ವಿವಿಧ ವಾದ್ಯಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಕರಲಿಂಗೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಭಕ್ತರು ಭಕ್ತಿಭಾವದಿಂದ ಪಾಲ್ಗೊಂಡು ಶ್ರೀ ಕರಲಿಂಗೇಶ್ವರ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಶಿವಲಿಂಗಯ್ಯ ಸ್ವಾಮಿ ಚೌಕಿಮಠ, ಸಿದ್ದಣ್ಣ ಪಾಟೀಲ, ಕಲ್ಯಾಣರಾವ್ ಗೊಣಾಕಿ, ಸುರೇಶ ದುರ್ಗೆ, ರಾಜಶೇಖರ ಮಾಚಿ, ಶಿವಾನಂದ ಗಿರಮಾಜಿ ಸೇರಿದಂತೆ ಗ್ರಾಮದ ಸದ್ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.



