ಜಿಲ್ಲಾಸುದ್ದಿ

ಕಲಬುರ್ಗಿ ಜಿಲ್ಲೆ ಬರ ಪ್ರದೇಶ ಘೋಷಣೆಗೆ ಆಗ್ರಹಿಸಿ ನಾಳೆ ಮುಖ್ಯಮಂತ್ರಿಗಳಿಗೆ ಸಿಪಿಐ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ

ಕಲಬುರ್ಗಿ, ಸೆ.೧೫- ಜಿಲ್ಲೆಯನ್ನು ಪೂರ್ಣ ಪ್ರಮಾಣದಲ್ಲಿ ಬರಪೀಡಿತ ಪ್ರದೇಶವೆಂದು ಘೋಷಿಸಿ, ಪರಿಹಾರ ನೀಡಲು ಸೆಪ್ಟೆಂಬರ್ ೧೬ರೊಳಗೆ ಸರ್ಕಾರ ಕ್ರಮ ಕೈಗೊಳ್ಳದೇ ಹೋದಲ್ಲಿ ಸೆಪ್ಟೆಂಬರ್ ೧೭ರಂದು ನಗರಕ್ಕೆ ಆಗಮಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಮಹೇಶಕುಮಾರ್ ರರಾಠೋಡ್ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ತಾಲ್ಲೂಕುಗಳನ್ನು ಬರ ಪರಿಹಾರ ಘೋಷಣೆ ಮಾಡಿ, ಉಳಿದ ತಾಲ್ಲೂಕುಗಳನ್ನು ಕಡೆಗಣಿಸಿದ್ದು ಸರಿಯಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿದರು.

ಜಿಲ್ಲೆಯಲ್ಲಿ ಬಹುತೇಕ ಒಣ ಬೇಸಾಯವಿದ್ದು, ಅದನ್ನು ನೀರಾವರಿಯಾಗಿಸಲು ಹಲವು ಯೋಜನೆಗಳನ್ನು ರೂಪಿಸಿದ್ದರೂ ಸಹ ಯಾವುದೂ ಸರಿಯಾಗಿ ಅನುಷ್ಟಾನಗೊಳ್ಳದೇ ಇರುವ ಕಾರಣಕ್ಕೆ ನಮ್ಮ ಜಿಲ್ಲೆಯು ಬಹುತೇಕ ರೈತರು ಪ್ರತಿ ವರ್ಷ ಕೃಷಿ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ ಬಚಾವತ್ ಆಯೋಗದ ಶಿಫಾರಸ್ಸಿನಂತೆ ನಮ್ಮ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳಲು ರೂಪಿಸಿರುವ ಯೋಜನೆಗಳನ್ನು ಅನುಷ್ಟಾನಗೊಳಿಸಬೇಕು, ಬರ ನಿರ್ವಹಣಾ ವ್ಯವಸ್ಥೆಯನ್ನು ಸದೃಢಗಪಳಿಸಲು ಶಾಶ್ವತ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಮಲ್ಲಾಬಾದ್ ಏತ ನೀರಾವರಿ ಯೋಜನೆಯ ಕಾಮಗಾರಿ ಸರಿಯಾಗಿ ನಡೆಯುತ್ತಿಲ್ಲ, ರೈತರಿಗೆ ನೋಟಿಸ್ ನೀಡದೇ ಅಕ್ರಮವಾಗಿ ರೈತರ ಜಮೀನನ್ನು ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕೂಡಿಕೊಂಡು ಮನಬಂದAತೆ ಕಾಮಗಾರಿಗಳನ್ನು ನಡೆಸುತ್ತಿದ್ದು, ಅದನ್ನು ಸರಿಪಡಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಿ ಗುಣಮಟ್ಟದ ಕಾಮಗಾರಿ ನಡೆಡೆಸಬೇಕು, ಇಲ್ಲದಿದ್ದರೆ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಿ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಅವರು ಆಗ್ರಹಿಸಿದರು.

ಜೇವರ್ಗಿಯಲ್ಲಿ ಕಳೆದ ೫ ತಿಂಗಳುಗಳಿAದ ನಡೆಸುತ್ತಿರುವ ಪೌರ ಕಾರ್ಮಿಕರ ಸಮಸ್ಯೆಯನ್ನು ಕೂಡಲೇ ಪರಿಹರಿಸಿ ಅವರಿಗೆ ಕೆಲಸ ಮತ್ತು ಬಾಕಿ ವೇತನ ಪಾವತಿಸಬೇಕೆಂದು ಒತ್ತಾಯಿಸಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ೨೦೧೪ ರಿಂದ ಇಲ್ಲಿಯವರೆಗೆ ೨೯ ಸಾವಿರ ಕೋಟಿ ರೂಪಾಯಿಗಳ ಅನುದಾನ ಒದಗಿಸಿದ್ದು ಅದರಲ್ಲಿ ೧೬ ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ರಾಜ್ಯ ಸರ್ಕಾರ ಪ್ರೋ, ನಂಜುAಡಪ್ಪನವರ ವರದಿಯ ನಂತರ ಎಷ್ಟು ಅಭಿವೃದ್ಧಿಯಾಗಿದೆ ಎಂದು ಅಧ್ಯಯನ ಮಾಡಿ ವರದಿ ಸಲ್ಲಿಸಲು ನೇಮಿಸಿದ್ದ ಪ್ರೋ ಗೋವಿಂದರಾವ್ ಅವರ ಸಮಿತಿಯು ಕೊಟ್ಟ ವರದಿಯಲ್ಲಿಯೇ ಸ್ಪಷ್ಟವಾಗಿ ಕಲ್ಯಾಣ ಕಾರ್ನಟಕ ಭಾಗದ ಎಲ್ಲಾ ತಾಲೂಕುಗಳು ಹಿಂದುಳಿದಿದೆ ಎಂದು ಹೇಳಿದೆ. ಆದ ಕಾರಣ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವೆಚ್ಚ ಮಾಡಿರುವ ೧೬ ಸಾವಿರ ಕೋಟಿ ರೂಪಾಯಗಳಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎನ್ನುವರು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಕಲ್ಯಾಣ ಕರ್ನಾಕಟಣ ಪ್ರದೇಶದ ಅಭಿವೃದ್ಧಿಗಾಗಿ ಬೆಚ್ಚ ಮಾಡಿರುವ ೧೫ ಸಾವಿನ ಕೋಟಿ ರೂಪಾಯಿಗಳ ಭ್ರಷ್ಟಾಚಾರದ ಕುರಿತು ಸಮಗ್ರ ತನಿಖೆ ನಡೆಸಿಬೇಕೆಂದು ಆಗ್ರಹಿಸಿದರು.

ಮೀಸಲಿಟ್ಟಿರುವ ಹಣದ ಬಾಕಿ ೧೩ ಸಾವಿರ ಕೋಟೆಗಳನ್ನು ಬಿಡುಗಡೆ ಮಾಡಿ ಸರಿಯಾದ ಕ್ರೀಯಾಯೋಜನ ರೂಪಿಸಿ ಕಲ್ಯಾಣ ಕರ್ನಾಟಕದ ಅಭೀವೃದ್ಧಿಗಾಗಿ ಸದ್ಬಳಕೆ ಆಗುವಂತೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸುವಂತೆ, ಶಿಕ್ಷಣಕ್ಕೆ ಸಂಬAಧಿಸಿದAತೆ: ಇದುವರೆಗೂ ನಮ್ಮ ಭಾಗದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಮಾಡಿಕೊಳ್ಳದೇ, ವಿಶ್ವ ವಿದ್ಯಾಲಯಗಳಿಗೆ ವಿಶೇಷ ಅನುದಾನಗಳನ್ನು ಒದಗಿಸದೇ ಕಲ್ಯಾಣ ಕರ್ನಾಟಕ ಭಾಗದ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಹಾಳುಗೆಡವಲಾಗಿದೆ. ಈಗಲೂ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬೇರೆ ಜಿಲ್ಲೆಗಳಿಗೆ ವಲಸೆ ಹೋಗುವದನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎಂದರು.

ಕಲ್ಯಾಣ ಕಾರ್ನಟಕದ ಬಹುತೇಕ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಶಿಕ್ಷಕರ ಕೊರತೆಯನ್ನು ಅನುಭವಿಸುತ್ತಿದ್ದು, ಅಂದಾಜ ೩೦ ಸಾವಿರಕ್ಕಿಂತಲೂ ಹೆಚ್ಚಿನ ಶಿಕ್ಷಕರ ಕೊರತೆಯನ್ನು ನಮ್ಮ ಭಾಗ ಅನುಭವಿಸುತ್ತಿದ್ದು, ಬಹುತೇಕ ಶಾಲೆಗಳಲ್ಲಿ ಮಕ್ಕಳಿಗೆ ಶಾಲಾ ಕೊಠಡಿಗಳು, ಶೌಚಾಲಯ, ಕುಡಿಯುವ ನೀರು, ಗ್ರಂಥಾಲಯ, ಆಟದ ಮೈದಾನ, ಕಂಪ್ಯೂಟರ್ ನಂತಹ ಮೂಲಭೂತ ಅವಶ್ಯಕತೆಗಳ ಕೊರತೆ ಇದೆ. ಅವುಗಳ ದುರಸ್ಥಿ ಮತ್ತು ಪೂರೈಕೆ ಹೆಸರಿನಲ್ಲಿಯೂ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರ ಪ್ರತಿ ವರ್ಷ ನಡೆಯುತ್ತಿದೆ. ಸರಕಾರೀ ವಿಶ್ವವಿದ್ಯಾಲಯಗಳನ್ನು ಹಾಳುಗೆಡವಿ ಖಾಸಗೀ ವಿಶ್ವ ವಿದ್ಯಾಲಯಗಳಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯದ ಉಳಿದ ಭಾಗಕ್ಕೆ ಹೋಲಿಸಿದರೆ ಕಲ್ಯಾಣ ಕರ್ನಾಕಟದಲ್ಲಿಯೇ ಅತೀ ಹೆಚ್ಚಿನ ಪ್ರಮಾಣದಲ್ಲಿ ಗುತ್ತಿಗೆ ಆಧಾನದ ಮೂಲಕ ಕೆಲಸ ಮಾಡುತ್ತಿರುವ ಉದ್ಯೋಗಿಗಳಿದ್ದು, ಗುತ್ತಿಗೆ ಪದ್ಧತಿಯನ್ನು ರಚ್ಚುಪಡಿಸಿ ಖಾಯಂ ಉದ್ಯೋಗ ಒದಗಿಸಬೇಕೆಂದು ಆಗ್ರಹಿಸಿದ ಅವರು, ಅದಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮೌಲಾ ಮುಲ್ಲಾ, ಭೀಮಾಶಂಕರ್ ಮಾಡಿಯಾಳ್, ಸಿದ್ದಪ್ಪ ಪಾಲ್ಕಿ, ಮೊಹ್ಮದ್ ಚೌಧರಿ, ಸಾಜೀದ್ ಅಹ್ಮದ್, ಶಿವಲಿಂಗಮ್ಮ ಲೆಂಗಟಿಕರ್, ಮಲ್ಲಿಕಾರ್ಜುನ್ ಕೆಲ್ಲೂರ್ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button