ಲೋಡ್ ಶೆಡ್ಡಿಂಗ್ ವಿರೋಧಿಸಿ ಜೆಸ್ಕಾಂ ಮುಂದೆ ರೈತರ ಪ್ರತಿಭಟನೆ

ಕಲಬುರ್ಗಿ, ಸೆ.೧೫- ಪಂಪಸೆಟ್ ರೈತರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಕೈಬಿಡಬೇಕು ಎಂದು ಒತ್ತಾಯಿಸಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಕಬ್ಬಿನೊಂದಿಗೆ ಗುಲಬರ್ಗಾ ವಿದ್ಯುತ್ ಪ್ರಸರಣಾ ನಿಗಮದ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು. ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದಪ್ಪ ಕಲಶೆಟ್ಟಿ, ದೇವು ಬಿರಾದಾರ್, ಚಂದಪ್ಪ ಪೂಜಾರಿ, ಸಾಯಿಬಣ್ಣ ಕೊರಬಾ, ವೀರಣಗೌಡ, ನಾಗಯ್ಯಸ್ವಾಮಿ ಮುಂತಾದವರು ಪಾಲ್ಗೊಂಡಿದ್ದರು.
ಪ್ರತಿಭಟನೆಕಾರರು ನಂತರ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿ, ರೈತರಿಗೆ ತ್ರಿಫೇಸ್ ವಿದ್ಯುತ್ ಪೂರೈಸುವ ಮೂಲಕ ರೈತ ವಿರೋಧಿ ನೀತಿಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪಂಪ್‌ಸೆಟ್ ರೈತರಿಗೆ ಟ್ರಾನ್ಸ್ ಫಾರ್ಮ್ ಸುಟ್ಟರೆ ಟ್ರಾನ್ಸ್ ಫಾರ್ಮ್ ತಕ್ಷಣವೇ ಕೂಡಿಸಿ ತಡವಾದರೆ ಇದ್ದ ಬೆಳೆಗಳನ್ನು ಒಣಗಿ ಹೋಗುತ್ತವೆ. ಟ್ರಾನ್ಸ್ ಫಾರ್ಮರ್ ಐಲ್ ಕೊರತೆ ಎದ್ದು ಕಾಣುತ್ತದೆ. ಜೆಸ್ಕಾಂ ಇಲಾಖೆ ನಿರ್ಲಕ್ಷಕ್ಕೆ ಕಾರಣವಾಗಿದೆ ಐಲ್ ಸಮಸ್ಯೆಯಿಂದ ಪಂಪ್‌ಸೆಟ್ ರೈತರಿಗೆ ಟ್ರಾನ್ಸ್ ಫಾರ್ಮರ್ ಸಿಗುತ್ತಿಲ್ಲ ಪಂಪ್ ರೈತರು ಪರದಾಡುವಂತಾಗಿದೆ. ಭೀಕರ ಬರಗಾಲ ಬಿದ್ದಿದೆ ಇದ್ದ ಬಾವಿಗಳು ಬೊರವೆಲ್‌ಗಳು ಹಳ್ಳ ಕೊಳ್ಳ ನಾಲ ನರಿ ಬತ್ತಿ ಹೋಗಿವೆ. ಅಡವಿಯಲ್ಲಿ ಕುಡಿಯಲು ನೀರು ಇಲ್ಲದಂತಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ರೈತರ ರೊಕ್ಕದ ಮಾಲು ಸಂಪೂರ್ಣ ಕೈ ಕೊಟ್ಟಿದೆ. ಇದ್ದ ಒಂದು ಬೆಳೆ ಮೇಲೆ ನಂಬಿ ಕುಳಿತ ರೈತರು ಕಬ್ಬು ಬಾಳಿ ಪಪ್ಪಾಯಿ ಹತ್ತಿ ಉಳಾಗಡ್ಡಿ ತರಕಾರಿ ಬೆಳೆಗಳು ಸಹ ಒಣಗುತ್ತಿವೆ ವಿದ್ಯುತ್ ಸಮಸ್ಯೆ ಗಂಭಿರ ಪರಿಸ್ಥಿತಿ ಎದುರಾಗಿದೆ. ಬರಗಾಲದಲ್ಲಿ ವಿದ್ಯುತ್ ಸಮಸ್ಯೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪಂಪ್ ರೈತರು ಗೊಳಾಟ ಮುಗಿಲು ಮುಟ್ಟಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.



