ಕಲ್ಯಾಣ ಕರ್ನಾಟಕ

ಬಸವಾದಿ ಶರಣ ತತ್ವಗಳ ವಿರೋಧಿ ಹಿಂದೂತ್ವ ಸಮಾರಂಭ ಖಂಡಿಸಿ ಸೆಪ್ಟೆಂಬರ್ ೨೫ರಂದು ಬೃಹತ್ ರ‍್ಯಾಲಿ

ಕಲಬುರ್ಗಿ, ಸೆ.೧೫- ನಗರದಲ್ಲಿ ಬಸವಾದಿ ಶರಣ ತತ್ವಗಳ ವಿರೋಧಿ ಹಿಂದೂತ್ವ ಸಮಾರಂಭ ಹಮ್ಮಿಕೊಂಡಿದ್ದನ್ನು ಖಂಡಿಸಿ ಇದೇ ಸೆಪ್ಟೆಂಬರ್ ೨೫ರಂದು ಬೆಳಿಗ್ಗೆ ೧೧ ಗಂಟೆಬಗೆ ಬೃಹತ್ ಪ್ರತಿಭಟನಾ ರ‍್ಯಾಲಿಯೊಂದಿಗೆ ಜಗತ್ ವೃತ್ತದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿದೆ ಎಂದು ಬಸವತತ್ವ ಹಾಗೂ ಸಂವಿಧಾನ ಸಂರಕ್ಷಣೆ ಹೋರಾಟ ಸಮಿತಿಯ ಡಾ. ಮೀನಾಕ್ಷಿ ಬಾಳಿ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣ ತತ್ವಗಳ ವಿರುದ್ಧ ನಡೆಯುತ್ತಿರುವ ಹಿಂದೂತ್ವದ ಸಮಾರಂಭವನ್ನು ಅಯೋಚಿಸುತ್ತಿರುವ ಬಸವದ್ರೋಹಿಗಳು ಕೂಡಲೆ ಅದರಿಂದ ಹೊರಬರುವ ಮೂಲಕ ತಮಗಂಟಿದ ಕಳಂಕವನ್ನು ತೊಡೆಯಬೇಕು. ನಗರದಲ್ಲಿ ಎಲ್ಲ ಜನಸಮುದಾಯಗಳು ಬಸವಾನುಯಾಯಿಗಳಾಗಿದ್ದಾರೆ. ನೀವೇನಾದರೂ ಆರ್‌ಎಸ್‌ಎಸ್‌ನ ಬಾಲಗೋಂಚಿಗಳಾಗಿ ಹೊರಟರೆ ಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ. ಪರಮ ಪಾವನವಾದ ಲಿಂಗಾಯತ ಪತ್ರಗಳನ್ನು ನಿಮ್ಮ ಸ್ವಾರ್ಥ ಸಾಧನೆಗಾಗಿ ಹಾಳು ಮಾಡಬಾರದು ಎಂದರು.

ಶರಣ ಸಿದ್ಧಾಂತವನ್ನು ನಿರ್ನಾಮ ಮಾಡಬಹುದೆಂದು ಬಗೆದಿದ್ದ ಸನಾತನಿಗಳಿಗೆ ಈಗ ಭ್ರಮ ನಿರಸನವಾಗಿದೆ. ಆಧುನಿಕ ಕಾಲಘಟ್ಟದಲ್ಲಿ ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನದಿAದಾಗಿ ಬಹುಸಂಖ್ಯಾತರು ಅಕ್ಷರ ಕಲಿತು ವಚನಗಳನ್ನು ಹೃದ್ಗತ ಮಾಡಿಕೊಂಡು ವೈದಿಕ ಪೊಳ್ಳು ಆಚರಣೆಗಳಿಂದ ದೂರ ಸರಿಯುತ್ತಿರುವುದನ್ನು ಕಂಡು ಅವರು ಭಯಕ್ಕೆ ಬಿದ್ದಿದ್ದಾರೆ. ಆದ್ದರಿಂದಲೆ ಅವರೀಗ ವಚನಗಳನ್ನು ತಿರುಚುವ ಹಾಗೂ ಶರಣ ಕ್ರಾಂತಿಯನ್ನು ಮಸಳಿಸುವ ದುಕ್ಕ ಪ್ರಯತ್ನ ಮಾಡುತ್ತಿದ್ದಾರೆ. ಅಂದು ಶರಣರ ಮಾರಣ ಹೋಮ ಮಾಡಿದವರೇ ಇಂದು ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಸೋಗು ಹಾಕಿಕೊಂಡು ಬರುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಳ್ಳನ್ನು ಮುಳ್ಳಿನಿಂದಲೆ ತೆಗೆಯಬೇಕೆಂಬ ವೈದಿಕರ ಹುನ್ನಾರಿನಂತೆ ಜಾತಿ ಲಿಂಗಾಯತರ ಮೂಲಕವೇ ಶರಣ ತತ್ವಗಳನ್ನು ತಿರುಚಲು ಮುಂದಾಗಿದ್ದಾರೆ. ಬಹುತ್ವ ಭಾರತಕ್ಕೆ ಅಂಟಿದ ಕ್ಯಾನ್ಸರ್ ನಂತಿರುವ ಆರ್ ಎಸ್ ಎಸ್ ಎಂಬ ಮುಖೇಡಿ ಸಂಸ್ಥೆಯು ಲಿಂಗಾಯತ ಮಠಾಧೀಶರಾಗಿರುವ ಕನ್ನೇರಿ ಸ್ವಾಮಿಗಳನ್ನು ಮುಂದೆ ಮಾಡಿಕೊಂಡು ಮತ್ತದೆ ಹಳಸಲು ಅನ್ನವನ್ನಿಟ್ಟುಕೊಂಡು ಕಲಬುರ್ಗಿಗೆ ಕಾಲಿಡುತ್ತಿದ್ದಾರೆ. ಈ ಸ್ವಾಮಿಗಳು ಬಾಯಿ ತೆಗೆದರೆ ಬಚ್ಚಲು ಕುಳಿ. ಈಗಾಗಲೇ ಇವರಿಗೆ ಕೋರ್ಟು ಛೀ ಮಾರಿ ಹಾಕಿತ್ತಲ್ಲದೆ ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳಿಗೆ ಕಾಲಿಡದಂತೆ ಆದೇಶಿಸಿತ್ತು. ಬಸವ ಕಲ್ಯಾಣದಲ್ಲಿ ಬಾಯಿ ತೆರೆಯದಂತೆ ನಿರ್ಬಂಧಿಸಿತ್ತು. ನೀನೊಬ್ಬ ಸ್ವಾಮಿಯೇ ಅಲ್‌ಲ. ಹಿಮಾಲಯಕ್ಕೆ ಹೋಗಿ ಧ್ಯಾನ ತಪಸ್ಸು ಮಾಡಬೇಕೆಂದು ವಿಧಿಸಿತ್ತು. ಇತ್ತೀಚೆಗೆ ಇವರು ಲಿಂಗಾಯತ ವಟುಗಳಿಗೆ ಯಜೋಪವಿತ್ತ ಸಂಸ್ಕಾರ ನೀಡಿ ಹೋಮ ಹವನ ಮಾಡಿಸಿದ್ದು ವೈರಲ್ ಆಗಿದೆ. ಹೀಗೆ ಬಿಟ್ಟರೆ ಇಷ್ಟಲಿಂಗ ತಗೆಸಿ ಜನವಾರ ಹಾಕುವರು ಎಂದು ಅವರು ದೂರಿದರು.

ಬರಲಿರುವ ಚುನಾವಣೆಯ ಬಿಜೆಪಿ ಪಕ್ಷದ ಕುತಂತ್ರದ ತಯಾರಿ ಆದಾಗಿದೆ ಎಂಬುದನ್ನು ಅರಿಯದನ್ನು ಬಸವಾನುಯಾಯಿಗಳು ಮೂರ್ಖರಲ್ಲ, ಬಸವಾದಿ ಶರಣರನ್ನು ಕೇಂದ್ರವಾಗಿಟ್ಟುಕೊAಡು ಯಾರಾದರೂ ಚಿಂತನ-ಮAಧನ ನಡೆಸಬಹುದು. ಅದರಂತೆ ಯಾವತ್ತಿನಂತೆ ವೈದಿಕರು ತಮ್ಮ ಹಿಂದೂ ಸಮಾವೇಶಗಳನ್ನು ಮಾಡಿಕೊಳ್ಳಬಹುದು ( ಅದೂ ಕೋಮದ್ವೇಷ ಕಾರದಂತೆ) ಆದರೆ ಬಸವಾದಿ ಶಿವಶರಣರನ್ನು ಹಿಂದೂ ಧರ್ಮದೊಂದಿಗೆ ಜೋಡಿಸುವುದು ಪಲು ನೀಚತನ ಅಷ್ಟೇ ಅಲ್ಲ ಲಿಂಗಾಯತರಾದಿಯಾಗಿ ಸರ್ವೆ ಶೂದ್ರ, ದಲಿತ, ದಮನಿತರನ್ನು ಮರಳು ಮಾಡುವ ಹುನ್ನಾರು ಇಲ್ಲಿದೆ. ಆರ್‌ಎಸ್‌ಎಸ್ ತನ್ನ ನೂರು ವರ್ಷದ ನಡೆಯಲ್ಲಿ ಯಾವತ್ತೂ ಬಸವಾದಿಗಳನ್ನು ಸ್ಮರಿಸಿದ್ದಿಲ್ಲ. ಈಗೇಕೆ ಅವರಿಗೆ ಇದ್ದಕ್ಕಿದ್ದಂತೆ ಬಸವಾದಿ ಶರಣರ ಹೆಸರು ಅನಿವಾರ್ಯವಾಗಿದೆ ಎಂದರೆ ಬಿಜೆಪಿಯಲ್ಲಿರುವ ಎಲ್ಲ ಭಾವನಾತ್ಮಕ ಬಾಣಗಳು ಖಾಲಿಯಾಗಿದೆ, ಅದಲ್ಲದೆ ವಚನ ಸಿದ್ಧಾಂತಗಳನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ನಿಸರ್ಗ ವಿವೇಕದ ಮೇಲೆ ನಿಂತಿರುವ ಬಸವ ತತ್ವಗಳು ಪಸರಿಸಿದರೆ ಅವರ ಆಟ ನಡೆಯುವುದಿಲ್ಲ ಎಂಬುದು ಅದರಿಗೆ ಪಕ್ಕಾ ಮನವರಿಕೆಯಾಗಿದೆ. ಆದ್ದರಿಂದ ಬಸವಾದಿ ಕಾಯಕ ಶರಣರ ಹೆಸರು ಹೇಳುತ್ತಲೆ ತತ್ವಗಳ ಕುತ್ತಿಗೆ ಹಿಚುಕುವ ಕುಟೀಲ ಕಾರಸ್ಥಾನ ಮಾಡ ಹೊರಟಿದ್ದಾರೆ. ಇದರಲ್ಲಿ ಅವರಿಗೆ ಯಶಸ್ಸು ದೊರೆಯದು ಎಂದು ಅವರು ಹೇಳಿದರು.

ಶರಣ-ಸಂತ-ಸೂಫಿ ತತ್ರಗಳ ಪ್ರಯೋಗ ಭೂಮಿಯಾಗಿರುವ ಕಲಬುರಗಿಯಲ್ಲಿ ಸನಾತನಿಗಳ ಮರೆ-ದೋಸ ನಡೆಯದು. ಕನ್ನೇರಿ ಸ್ವಾಮಿಗಳಾದಿಯಾಗಿ ಸನಾತನಿ ಸಂತಾನಕ್ಕೆ ಕಲ್ಯಾಣದ ಹೆಬ್ಬಾಗಿಲಾಗಿರುವ ಕಲಬುರಗಿಯಲ್ಲಿ ಜಾಗವಿಲ್ಲ, ಬಸವಾದಿ ಶರಣರ ಹೆಸರನ್ನು ಹಿಂದೂ ಶಬ್ದದಿಂದ ಬೇರ್ಪಡಿಸದಿದ್ದರೆ ಅವರು ಬಸವಾನುಯಾಯಿಗಳ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ. ತನ್ಮೂಲಕ ಸರಕಾರಕ್ಕೆ ಅಂಧವರಿಗೆ ಕಾಲಿಡಲು ಅವಕಾಶ ಕೊಡಬಾರದೆಂದು ಮನವಿ ಮಾಡಿಕೊಳ್ಳುತ್ತೇವೆ. ಕಾರಣ ಕನ್ನೇರಿ ಸ್ವಾಮಿಗಳು ಮತ್ತವರ ಅನುಯಾಯಿಗಳು ಹೋದಲೆಲ್ಲ ಕೋಮುದ್ವೇಷವನ್ನು ಹಬ್ಬಿಸಿದ್ದಾರೆ. ಧರ್ಮಗಳ ನಡುವೆ ದೊಂಬೆ-ಗಲಭೆಗಳು ಹುಟ್ಟಿಸಿದ್ದಾರೆ. ಕಲಬುರ್ಗಿ ಹೇಳಿ ಕೇಳಿ ಬುದ್ಧ-ಬಸವ-ಬಾಬಾರ ಪ್ರಜ್ಞಾವಂತಿಕೆಗೆ ಹೆಸರಾದ ನೆಲ. ಇಂಥಲ್ಲಿ ಬಸವದ್ರೋಹಿಗಳು ಬರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಸರ್ಕಾರದ್ದು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರೊ. ಆರ್.ಕೆ. ಹುಡಗಿ, ಅರ್ಜುನ್ ಭದ್ರೆ, ಮರೆಪ್ಪ ಹಳ್ಳಿ, ಪಿಡ್ಡಪ್ಪ ಜಾಲಗಾರ್, ಶಾಮ್ ನಾಟೀಕಾರ್, ಸುಧಾಮ್ ಧನ್ನಿ, ಆರ್.ಜಿ. ಶೆಟಗಾರ್, ರವೀಂದ್ರ ಶಾಬಾದಿ, ರವಿ ಸಜ್ಜನ್, ಶಿವಶರಣಪ್ಪ ಮೂಳೆಗಾಂವ್, ಮಹೇಶ್ ಎಸ್.ಪಿ., ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button