ಜಿಲ್ಲಾಸುದ್ದಿ

ಶ್ರಾವಣ ಮಾಸದ ಮುಕ್ತಾಯ: ಸುಗೂರ ಎನ್‌ನಲ್ಲಿ ಭಕ್ತಿಭಾವದ ಮೆರವಣಿಗೆ

ಚಿತ್ತಾಪುರ, ಸೆ.13: ತಾಲ್ಲೂಕಿನ ಸುಗೂರ ಎನ್ ಗ್ರಾಮದಲ್ಲಿ ಶ್ರಾವಣ ಮಾಸದ ಮುಕ್ತಾಯದ ಅಂಗವಾಗಿ ವಾಯುಪುತ್ರ ಶ್ರೀ ಹನುಮಾನ್ (ಆಂಜನೇಯ ಸ್ವಾಮಿ) ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾ ಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಶ್ರೀ ಹನುಮಾನ್ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ಅಂಗವಾಗಿ ಸಪ್ತಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರ ಅಂಗವಾಗಿ ಹನುಮಾನ್ ದೇವರ ಭಾವಚಿತ್ರವನ್ನು ತಲೆಯ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

ಡೊಳ್ಳು, ತಮಟೆ ಸೇರಿದಂತೆ ವಿವಿಧ ವಾದ್ಯಗಳ ಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಗ್ರಾಮದ ಪ್ರಮುಖರು, ಭಕ್ತರು, ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಪಟಾಕಿಗಳ ಸಿಡಿತದ ನಡುವೆ ಗ್ರಾಮೀಣ ಸೊಗಡಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವ ಹಾಗೂ ಸಾಂಸ್ಕೃತಿಕ ವಾತಾವರಣಕ್ಕೆ ಮೆರುಗು ನೀಡಿದವು. ಕಾರ್ಯಕ್ರಮದ ಬಳಿಕ ದೇವಸ್ಥಾನದ ಆವರಣದಲ್ಲಿ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಶ್ರೀ ರಾಮಲಿಂಗಯ್ಯ ಸ್ವಾಮಿ, ಸಿದ್ದಲಿಂಗಯ್ಯ ಸ್ವಾಮಿ, ಸೋಮಣ್ಣಗೌಡ ತುಮಕೂರು, ನಾಗರಾಜ ಪಾಟೀಲ ಬೆನಕನಹಳ್ಳಿ, ಮಹೇಶ ಪಾಟೀಲ, ಅಭಿಜಿತ್ ರೆಡ್ಡಿ ಪಾಲಿ ಪಾಟೀಲ, ಕರಬಸಪ್ಪ ದಂಡಗಿ, ಬಸವರಾಜ ಹಡಪದ, ರಾಜೇಂದ್ರ ನಾಯ್ಕೊಡಿ, ಹಣಮಂತ ನಾಯ್ಕೊಡಿ, ರಾಜೇಂದ್ರ ತಳವಾರ, ಬಸವರಾಜ ಕುಂಬಾರ, ರಾಜಕುಮಾರ ಕುಂಬಾರ, ಸಂತೋಷ ಧರ್ಮನರ್, ರಾಜು ಚವ್ಹಾಣ, ಶಂಕರ ಬೇನಿಗಿಡ, ಶರಣು ಹೊಳಮಾರಡಗಿ, ಕಾಂತಪ್ಪ ತಳವಾರ, ರಾಜ ಅಹ್ಮದ್, ಮಹ್ಮದ್ ಟೋಕ್ರೆ, ಶರೀಫ್ ಬಂಟ್ನಳ್ಳಿ, ಶರಣು ಉಪ್ಪಾರ, ಮಲ್ಲಪ್ಪ ಪೂಜಾರಿ, ಸಾಬಣ್ಣ ಬೇನಿಗಿಡ, ಶರಣು ತಂ/ಗುಂಡಪ್ಪ, ರಾಜು ಮಂಡ್ನಾಳ, ಮಲ್ಲಪ್ಪ ಹಂಗನಹಳ್ಳಿ ಸೇರಿದಂತೆ ಊರಿನ ನೂರಾರು ಯುವಕರು ಹಾಗೂ ಹನುಮಾನ್ ದೇವಸ್ಥಾನದ ಭಕ್ತರು ಭಾಗವಹಿಸಿದ್ದರು.

ಕಾರ್ಯಕ್ರಮದ ಕುರಿತು ಮಲ್ಲಿಕಾರ್ಜುನ ಬಿ. ಹಡಪದ, ಸುಗೂರ ಎನ್ ಅವರು ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button