ಕ್ರೀಡೆಶಿಕ್ಷಣ

ಕುಲಗೋಡ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ: ಅರಳಿಮಟ್ಟಿ ಶಾಲೆಯ ವಿದ್ಯಾರ್ಥಿಗಳ ಅಬ್ಬರ..!

ಕ್ರೀಡಾಂಗಣದಲ್ಲಿ ಮಿಂಚಿದ ಅರಳಿಮಟ್ಟಿ ಶಾಲೆಯ ವಿದ್ಯಾರ್ಥಿಗಳು; ಕ್ಲಸ್ಟರ್ ಮಟ್ಟದಲ್ಲಿ ಹಲವು ಪ್ರಶಸ್ತಿಗಳ ಮುಡಿಗೇರಿಸಿಕೊಂಡ ಪ್ರತಿಭೆಗಳು

ಚಿಕ್ಕೋಡಿ, ಆ.26: ಶೈಕ್ಷಣಿಕ ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೋಡ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ 2026-27ನೇ ಸಾಲಿನ ಕ್ರೀಡಾಕೂಟವು ಕುಲಗೋಡ ಎನ್‌ಎಸ್‌ಎಫ್ ಶಾಲೆಯ ಆವರಣದಲ್ಲಿ ಶ್ರೀ ಸರಸ್ವತಿ ಶಾಲೆಯ ಪ್ರಾಯೋಜಕತ್ವದಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಅರಳಿಮಟ್ಟಿ ಪಿಎಂಶ್ರೀ ಪ್ರಾಥಮಿಕ ಕನ್ನಡ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಗಮನ ಸೆಳೆದರು.

ವಿದ್ಯಾರ್ಥಿನಿಯರ ವಿಭಾಗದ ಕೋಕೋ ಸ್ಪರ್ಧೆಯಲ್ಲಿ ಅರಳಿಮಟ್ಟಿ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು. ಇದೇ ರೀತಿ 100 ಮೀಟರ್ ಹಾಗೂ 200 ಮೀಟರ್ ಓಟದ ಎರಡೂ ವಿಭಾಗಗಳಲ್ಲಿ ಸಂಜನಾ ನಾಗನೂರ ಪ್ರಥಮ ಸ್ಥಾನ ಗಳಿಸಿದರು.

600 ಮೀಟರ್ ಓಟದಲ್ಲಿ ಲಕ್ಷ್ಮೀ ರಾಯಪ್ಪನವರ್, 80 ಮೀಟರ್ ಹರ್ಡಲ್ಸ್‌ನಲ್ಲಿ ಭುವನೇಶ್ವರಿ ಪುರವಂತ ಹಾಗೂ ಶಾಟ್‌ಪುಟ್ ಮತ್ತು ಎತ್ತರ ಜಿಗಿತದಲ್ಲಿ ರೇಣುಕಾ ತೇರದಾಳ ಪ್ರಥಮ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದರು.

ಇನ್ನು ಶಾಟ್‌ಪುಟ್ ಹಾಗೂ ಎತ್ತರ ಜಿಗಿತದಲ್ಲಿ ಲಕ್ಷ್ಮೀ ರಾಯಪ್ಪನವರ್ ಎರಡೂ ವಿಭಾಗಗಳಲ್ಲಿ ತೃತೀಯ ಸ್ಥಾನ ಪಡೆದು ಗಮನ ಸೆಳೆದರು.

200 ಮೀಟರ್ ಓಟದಲ್ಲಿ ಭುವನೇಶ್ವರಿ ಪುರವಂತ, 400 ಮೀಟರ್ ಓಟದಲ್ಲಿ ಪೃಥ್ವಿ ಹೊಳಿ, 80 ಮೀಟರ್ ಹರ್ಡಲ್ಸ್‌ನಲ್ಲಿ ಸಮೃದ್ಧಿ ರಾಯಪ್ಪನವರ್ ಹಾಗೂ ಉದ್ದ ಜಿಗಿತದಲ್ಲಿ ಗುರುಭಕ್ತಿ ಕುದರಿಮನಿ ದ್ವಿತೀಯ ಸ್ಥಾನ ಪಡೆದುಕೊಂಡರು.

ವಿದ್ಯಾರ್ಥಿಗಳ ವಿಭಾಗದ ಕೋಕೋ ಪಂದ್ಯದಲ್ಲಿಯೂ ಅರಳಿಮಟ್ಟಿ ಶಾಲೆಯ ತಂಡ ಪ್ರಥಮ ಸ್ಥಾನ ಪಡೆಯಿತು. 600 ಮೀಟರ್ ಓಟದಲ್ಲಿ ರಾಜದೀಪ್ ಮಲ್ಲಪ್ಪನವರ್ ಪ್ರಥಮ ಸ್ಥಾನ ಗಳಿಸಿದರೆ, 100 ಮೀಟರ್ ಓಟದಲ್ಲಿ ದಿನೇಶ್ ಸತ್ತಿಗೇರಿ ದ್ವಿತೀಯ ಸ್ಥಾನ ಪಡೆದರು. ಡಿಸ್ಕಸ್ ಥ್ರೋನಲ್ಲಿ ಮನೋಜ್ ಕಾಗವಾಡ ದ್ವಿತೀಯ ಸ್ಥಾನ ಹಾಗೂ ಈರಯ್ಯ ಮಠಪತಿ ತೃತೀಯ ಸ್ಥಾನ ಪಡೆದುಕೊಂಡರು.

ಕ್ರೀಡಾಕೂಟದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ್ ತಳವಾರ್, ದೈಹಿಕ ಶಿಕ್ಷಣ ಶಿಕ್ಷಕರಾದ ಪೂಜೇರಿ, ಗಸ್ತಿ, ಹುಚ್ಚನ್ನವರ, ಮುಖ್ಯ ಶಿಕ್ಷಕರಾದ ಮಲ್ಲಿಕಾರ್ಜುನ ಹುಲಗಬಾಳಿ ಹಾಗೂ ಶಿಕ್ಷಕರಾದ ಬಡಕಲ, ದಂಡಿನ, ಅಂತಾಳಿ, ಸಿದ್ದಾಪುರ, ರಮೇಶ್ ನಾಯಕ್ ಸೇರಿದಂತೆ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಶಿಕ್ಷಕರಾದ ಶ್ರೀಮತಿ ಮಹಾದೇವಿ ಕೋಲಕಾರ್, ಪ್ರಿಯಾಂಕ, ದಳವಾಯಿ, ಹೇಮಂತ್, ಈರಣ್ಣ, ರಾಯಣ್ಣ, ಮಲ್ಲು ಸೇರಿದಂತೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಎಲ್ಲ ಸದಸ್ಯರು ಮತ್ತು ಗ್ರಾಮದ ಕ್ರೀಡಾಭಿಮಾನಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದರು.

Related Articles

Leave a Reply

Your email address will not be published. Required fields are marked *

Back to top button