ಪೇಠ ಶಿರೂರಿನಲ್ಲಿ ಅದ್ದೂರಿ 80ನೇ ಸ್ವಾತಂತ್ರ್ಯ ದಿನಾಚರಣೆ
ದೇಶದ ಶಾಂತಿ, ಪ್ರಗತಿ ಹಾಗೂ ಏಕತೆಗಾಗಿ ಶ್ರಮಿಸೋಣ: ಡಾ. ಇಂದುಶ್ರೀ ಎಂ.ಸಿ. ಪವಾರ

ಚಿತ್ತಾಪುರ, ಆ.15: ತಾಲೂಕಿನ ಪೇಠ ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಇಂದುಶ್ರೀ ಎಂ.ಸಿ. ಪವಾರ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನೇ ದೇಶಕ್ಕಾಗಿ ಸಮರ್ಪಿಸಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನವನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದು ಹೇಳಿದರು.
ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಬೇಕು. ದೇಶವು ಸದಾ ಶಾಂತಿ, ಪ್ರಗತಿ ಮತ್ತು ಏಕತೆಯಿಂದ ಮುನ್ನಡೆಯಲು ನಾವೆಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಡಾ. ಇಂದುಶ್ರೀ ಎಂ.ಸಿ. ಪವಾರ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಕುಮಾರ್ ತಳವಾರ್, ಸತೀಶ್ ನೀಲಂಗಿ, ರಮೇಶ್ ಜಿ.ಆರ್., ಸುಧಾರಾಣಿ ಎಂ., ಶ್ರೀನಿವಾಸ್ ರಾಠೋಡ್, ಸುಚಿತ್ರ ಇಳ್ಳಿ, ರೂಪ ಬೈರಾಮಡಗಿ, ಮಲ್ಲಮ್ಮ ಕೊಂಡೇದ್, ಇಂದುಬಾಯಿ ಶಿರೂರ, ಭಾಗ್ಯಶ್ರೀ ಎಸ್. ಹೂಗಾರ, ಸಂಗೀತಾ ಶಿವಾನಂದ ಕುಂಬಾರ್, ಲಲಿತಮ್ಮ ತೋಟದವರ್, ನಿಂಗರಾಜ್ ಬಗಲಿ, ವಸಂತ ಚೌವ್ಹಾಣ, ಸಂತೋಷ್ ಜಾದವ್, ಸಿದ್ದಣ್ಣ, ಬೆಳ್ಳಪ್ಪ ಹುಗ್ಗಿ, ಸಂತೋಷ್ ಪವಾರ್, ಅನಿಲ್ ಕೊಡಸಾ, ಶಿವಾನಂದ ಕುಂಬಾರ್ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಗೂ ಸ್ಥಳೀಯರು ಭಾಗವಹಿಸಿದ್ದರು.



