ಸಮಾಜ
ಶಿವರಾಜ್ ತಂಗಡಗಿಗೆ ಸಚಿವ ಸ್ಥಾನ: ಭೋವಿ–ವಡ್ಡರ ಸಮಾಜದಿಂದ ವಿಜಯೋತ್ಸವ
ಸಿಹಿ ಹಂಚಿ ಸಂಭ್ರಮಾಚರಣೆ; ರಾಜ್ಯದ ಅಭಿವೃದ್ಧಿಗೆ ಉತ್ತಮ ಸೇವೆ ಸಲ್ಲಿಸುವಂತೆ ಹಾರೈಕೆ

ಕಲಬುರಗಿ, ಆ.4: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಶಿವರಾಜ್ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಿರುವುದನ್ನು ಸ್ವಾಗತಿಸಿ ಜಿಲ್ಲಾ ಭೋವಿ–ವಡ್ಡರ ಸಮಾಜದ ವತಿಯಿಂದ ನಗರದ ಬ್ರಹ್ಮಪುರ ವಡ್ಡರಗಲ್ಲಿಯ ಭಗತ್‌ಸಿಂಗ್ ಚೌಕ್ ಬಡಾವಣೆಯಲ್ಲಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಾತನಾಡಿ, ಶಿವರಾಜ್ ತಂಗಡಗಿ ಅವರಿಗೆ ಸಚಿವ ಸ್ಥಾನ ದೊರೆತಿರುವುದು ಸಮಾಜಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಚಿವರಾಗಿ ರಾಜ್ಯದ ಅಭಿವೃದ್ಧಿ ಹಾಗೂ ಸಮಾಜದ ಕಲ್ಯಾಣಕ್ಕಾಗಿ ಉತ್ತಮ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭೀಮಶಂಕರ ಬಂಕೂರ್, ರಾಜು ಎಂ. ಪುರೆ, ತಿಮ್ಮಣ್ಣ ಜಾಧವ್, ಬಸವರಾಜ ಇಂಚಲಗಿ, ರಾಘವೇಂದ್ರ ಲಸ್ಕರಿ, ಶಿವಕುಮಾರ್ ಎಂ. ಪುರೆ, ದೀಪಕ್, ಪಪ್ಪು, ನೀಲಕಂಠ, ಸಿದ್ದಮ್ಮ ಸೇರಿದಂತೆ ಭೋವಿ–ವಡ್ಡರ ಸಮಾಜದ ಹಿರಿಯರು, ಮುಖಂಡರು ಹಾಗೂ ಯುವಕರು ಭಾಗವಹಿಸಿ ಸಂಭ್ರಮ ಹಂಚಿಕೊಂಡರು.



