ನಾಳೆ ಕಲಬುರಗಿಯಲ್ಲಿ ರೆಡ್ಡಿ ಸಮಾಜದ ಬೃಹತ್ ಯುವ ಸಮಾವೇಶ
ಮೇರು ಸಾಧಕರಿಗೆ ಸನ್ಮಾನ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ; ಸಮಾಜದ ಯುವಶಕ್ತಿಗೆ ಪ್ರೇರಣೆ ನೀಡುವ ಸಮಾವೇಶ

ನಗರದ ಜೈಭವಾನಿ ಕನ್ವೆನ್ಷನ್ ಹಾಲ್‌ನಲ್ಲಿ ಜುಲೈ 26ರಂದು ರೆಡ್ಡಿ ಸಮಾಜದ ಬೃಹತ್ ಯುವ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ರೆಡ್ಡಿ ಸಮಾಜ ಯುವಕರ ಸಂಘದ ಅಧ್ಯಕ್ಷ ವಿಶ್ವ ಕಾಮರೆಡ್ಡಿ ಗೊಟೂರು ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಬಳ್ಳಾರಿ ಶಾಸಕ ನಾರಾ ಭರತ್‌ರೆಡ್ಡಿ ಹಾಗೂ ಗುರುಮಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಉದ್ಘಾಟಿಸಲಿದ್ದಾರೆ. ದಿವ್ಯ ಸಾನ್ನಿಧ್ಯವನ್ನು ವಿವಿಧ ಮಠಾಧೀಶರು ವಹಿಸಲಿದ್ದು, ಮಾಜಿ ಸಚಿವ ಹಾಗೂ ಶಾಸಕ ಶರಣಬಸಪ್ಪ ದರ್ಶನಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಿದರು.
ಸಮಾವೇಶದಲ್ಲಿ ಡಾ. ಶರಣಬಸಪ್ಪ ಕಾಮರೆಡ್ಡಿ ಹಾಗೂ ಪ್ರೊ. ಚೆನ್ನಾರೆಡ್ಡಿ ಪಾಟೀಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು, ಮಾಜಿ ಶಾಸಕಿ ಶ್ರೀಮತಿ ಸೌಮ್ಯರೆಡ್ಡಿ ಹಾಗೂ ಯುವ ಗೌರವಾಧ್ಯಕ್ಷ ಮಹೇಶ್ ಹೊಸೂರಕರ್ ಸೇರಿದಂತೆ ಹಲವು ಗಣ್ಯರು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಜೆಸ್ಕಾಂ ಅಧ್ಯಕ್ಷ ಪ್ರವೀಣ್ ಪಾಟೀಲ ಹರವಾಳ್ ಹಾಗೂ ಜೆಡಿಎಸ್ ಮುಖಂಡ ಕೃಷ್ಣಾರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ರೆಡ್ಡಿ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಗುವುದು. ಅಲ್ಲದೆ ಶಿಕ್ಷಣ, ಸಮಾಜಸೇವೆ, ಕಲೆ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಗಣ್ಯರನ್ನೂ ಗೌರವಿಸಲಾಗುವುದು ಎಂದು ವಿಶ್ವ ಕಾಮರೆಡ್ಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವಲಿಂಗರೆಡ್ಡಿಗೌಡ ಬೆನಕನಳ್ಳಿ, ಮಹೇಶ್ ಹೊಸೂರಕರ್, ಕಿರಣರೆಡ್ಡಿ, ಬಸವರಾಜರೆಡ್ಡಿ ಹಗರಗುಂಡಗಿ, ಮಲ್ಲಾರೆಡ್ಡಿ ಸಾಹುಕಾರ್, ಆನಂದರೆಡ್ಡಿ ಪಟಪಳ್ಳಿ, ಕೇಶವರೆಡ್ಡಿ, ಮಹೇಶರೆಡ್ಡಿ ಮಾಡಬೂಳ, ನಾಗರೆಡ್ಡಿ, ಮಲ್ಲಿನಾಥ ಕೋಡ್ಲೆ, ಶ್ರೀಶೈಲರೆಡ್ಡಿ ಮರಪಳ್ಳಿ, ಮಲ್ಲಿನಾಥ ಮುನ್ನಳ್ಳಿ, ಶಿವು ಶಹಾಬಾದ್ ಹಾಗೂ ಅಖಿಲ್ ದೊಡ್ಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



