ಜಿಲ್ಲಾಸುದ್ದಿ

ಜೇವರ್ಗಿಯಲ್ಲಿ ರೈತರಿಗೆ ತೊಗರಿ ಬೀಜಗಳ ಮಿನಿ ಕಿಟ್ ವಿತರಣೆ

ಮಳೆಯ ಮುನ್ಸೂಚನೆ ಹಿನ್ನೆಲೆ ಬಿತ್ತನೆ ಕಾರ್ಯ ಚುರುಕುಗೊಳಿಸಲು ಕೃಷಿ ಅಧಿಕಾರಿಗಳ ಸಲಹೆ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರ ಗ್ರಾಮದಲ್ಲಿ ಕೃಷಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆತ್ಮನಿರ್ಭರ ಯೋಜನೆಯಡಿ ಯುಕೆಉ-೧೫೨ ತಳಿಯ ತೊಗರಿ ಬೀಜಗಳ ಮಿನಿ ಕಿಟ್‌ಗಳನ್ನು ರೈತರಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಇಲಾಖೆ ಅಧಿಕಾರಿ ರಾಜು ಪವಾರ್, ಈ ವರ್ಷ ಮಳೆಯ ಕೊರತೆಯಿಂದ ಸಾಕಷ್ಟು ರೈತರು ಬಿತ್ತನೆ ಕಾರ್ಯದಿಂದ ದೂರ ಉಳಿದಿದ್ದಾರೆ. ಆದರೆ ಹವಾಮಾನ ಇಲಾಖೆ ಮಳೆಯ ಆರಂಭದ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿ, ಕೃಷಿ ಇಲಾಖೆ ನೀಡುತ್ತಿರುವ ಗುಣಮಟ್ಟದ ಬೀಜ ಹಾಗೂ ಇತರೆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ಬಸವರಾಜ ಬಿರಾದರ್, ಕ್ಷೇತ್ರ ತಾಂತ್ರಿಕ ವ್ಯವಸ್ಥಾಪಕ ಸಿದ್ದರಾಮ ಪೂಜಾರಿ, ಕೃಷಿ ಸಂಜೀವಿನಿ ವಾಹನದ ಸಿಬ್ಬಂದಿ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಬಸವಂತರಾಯ ಕೋಳಕೂರ, ಮಲ್ಲಿನಾಥ ಕುಲಕರ್ಣಿ, ಈರಣ್ಣ ಯಾದವ್, ರವಿ ಅಡಿಗಿಲ್, ಸಿದ್ದು ಕೂಡಿ, ಶಿವಲಿಂಗಪ್ಪ ಶಂಕಾ, ಈರಣ್ಣ ಉದನೂರು ಸೇರಿದಂತೆ ಹಲವರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button