ಜಿಲ್ಲಾಸುದ್ದಿ

ಅತನೂರ್ ಬಳಿ ಅಕ್ರಮ ಪಡಿತರ ಸಾಗಣೆಯ ವಾಹನ ಪತ್ತೆ

ಅಫಜಲಪುರ, ಜು.4- ಆಹಾರ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ಅತನೂರು ಬಳಿ ಅಕ್ರಮ ಪಡಿತರ ಸಾಗಣೆಯ ವಾಹನವನ್ನು ಪತ್ತೆ ಹಚ್ಚಿದ್ದಾರೆ. ಮಹಾರಾಷ್ಟçಕ್ಕೆ ಅಕ್ರಮವಾಗಿ ವಾಹನದಲ್ಲಿ ಪಡಿತರ ಸಾಗಿಸಲಾಗಿಸುತ್ತಿದೆ ಎಂಬ ಖಚಿತ ಭಾತ್ಮಿ ಮೇರೆಗೆ ತಹಸಿಲ್ದಾರ್ ಸಂಜೀವಕುಮಾರ್ ದಾಸರ್ ಅವರ ಆದೇಶದಂತೆ ಅಧಿಕಾರಿಗಳು ಅತನೂರಿನಲ್ಲಿ ಕಾರ್ಯಾಚರಣೆ ಕೈಗೊಂಡು ಅಕ್ರಮ ಪಡಿತರ ಸಾಗಣೆಯ ವಾಹನವನ್ನು ಪತ್ತೆ ಹಚ್ಚಿದ್ದಾರೆ.


ವಾಹನವನ್ನು ಪರಿಶೀಲಿಸಿದಾಗ ಸುಮಾರು 3,39,320ರೂ.ಗಳ ಮೌಲ್ಯದ 99.80 ಕ್ವಿಂಟಲ್ ಅಕ್ಕಿ ಪತ್ತೆಯಾಗಿದೆ. ಕಾಳಸಂತೆಯಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ಮಾಡಲು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಪ್ರಾಥಮಿಕ ತನಿಖೆಯ ಸಂದರ್ಭದಲ್ಲಿ ಪಡೆದಿದ್ದಾರೆ. ಈ ಕುರಿತು ವಾಹನದ ಮಾಲಿಕ ದಿಗಂಬರ್ ನಾಗಣಸೂರ್ ವಿರುದ್ಧ ರೇವೂರ್(ಬಿ) ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button