ಜಿಲ್ಲಾಸುದ್ದಿ

ಅನಧಿಕೃತ ಹಿಸ್ಸಾಗಳ ರದ್ದು: ಕಲಬುರ್ಗಿ ಮಹಾನಗರ ಪಾಲಿಕೆ ವಿರುದ್ಧ ತಾರತಮ್ಯದ ಆರೋಪ

ಕಲಬುರ್ಗಿ, ಜು.4- ಅನಧಿಕೃತ ಹಿಸ್ಸಾಗಳನ್ನು ರದ್ದುಗೊಳಿಸುವ ಕ್ರಮದಲ್ಲಿ ಮಹಾನಗರ ಪಾಲಿಕೆಯು ತಾರತಮ್ಯ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ಯುವ ಶಕ್ತಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಕುಮಾರ್ ಸಾಗರ್ ಅವರು ಆರೋಪಿಸಿದರು.


ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವಕ್ಕಲಗೇರಾ ಗ್ರಾಮದ ಸರ್ವೆ ನಂ.5ರಲ್ಲಿ ಬರುವ ಹಿಸ್ಸಾಗಳಾದ 1ರಿಂದ 5ರವರೆಗಿನ ಹಿಸ್ಸಾಗಳು ಸರಿಯಾಗಿದ್ದು, ಆದರೆ ಲ್ಯಾಂಡ್ ಮಾಫೀಯಾಗಳ ಜೊತೆ ಕೆಲವು ಅಧಿಕಾರಿಗಳು ಶಾಮಿಲಾಗಿ ಸರ್ವೆ ನಂ.5ರಲ್ಲಿ 6ರಿಂದ 14ರವರೆಗಿನ ಎಲ್ಲಾ ಹಿಸ್ಸಾಗಳು ಅನಧಿಕೃತವಾಗಿ ಅಧಿಕಾರಿಗಳು ನಿರ್ಮಿಸಿದ್ದಾರೆ ಎಂದರು.


ಈ ಎಲ್ಲ ಅನಧಿಕೃತ ಹಿಸ್ಸಾಗಳನ್ನು ರದ್ದುಗೊಳಿಸುವ ಕುರಿತು ಹಲವಾರು ಬಾರಿ ಎಲ್ಲ ಮೇಲಾಧಿಕಾರಿಗಳ ಗಮನಕ್ಕೆ ತಂದಾಗ ಕೇವಲ ಸರ್ವೆ ನಂ. 5ರಲ್ಲಿ ಹಿಸ್ಸಾ 7ನ್ನು ನಗರಾಭಿವೃದ್ಧಿ ಪ್ರಾಧಿಕಾರದವರು ರದ್ದುಗೊಳಿಸಿ ಮಹಾನಗರ ಪಾಲಿಕೆಯವರಿಗೆ ತೆರವುಗೊಳಿಸಲು ರವಾನಿಸಿರುತ್ತಾರೆ. ಆದರೆ ಮಹಾನಗರ ಪಾಲಿಕೆಯವರು ಸುಮಾರು ಆರು ತಿಂಗಳಗಳ ಕಾಲ ಕಳೆದರು ಕೂಡ ತೆರವುಗೊಳಿಸುತ್ತಿಲ್ಲ ಎಂದು ಅವರು ಗಂಭೀರ ಆರೋಪ ಮಾಡಿದರು.


ಅಧಿಕಾರಿಗಳು ಮಾಡುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಮ್ಮ ಗಮನಕ್ಕೆ ತಂದು ಈ ರೀತಿ ಆಗದೇ ಇರುವ ಹಾಗೆ ಅಧಿಕಾರಿಗಳು ಹಾಗೂ ಲ್ಯಾಂಡ್ ಮಾಫಿಯಾಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button