ಜಿಲ್ಲಾಸುದ್ದಿ

ರಸಗೊಬ್ಬರ ತರಲು ಹೋದ ವ್ಯಕ್ತಿ ಶವವಾಗಿ ಪತ್ತೆ

ಕಲಬುರ್ಗಿ, ಜು.4- ರಸಗೊಬ್ಬರ ತರಲು ಹೋದ ವ್ಯಕ್ತಿಯೊಬ್ಬ ಶವವಾಗಿ ಪತ್ತೆಯಾದ ಘಟನೆ ಅಫಜಲಪುರ ತಾಲ್ಲೂಕಿನ ಹಾವನೂರು ಗ್ರಾಮದ ಬಳಿ ಸಂಭವಿಸಿದೆ. ಮೃತನಿಗೆ ಹಾವನೂರು ಗ್ರಾಮದ ಶಿವಕುಮಾರ್ ಹೊಸಮನಿ (35) ಎಂದು ಗುರುತಿಸಲಾಗಿದೆ.


ಕಳೆದ ಜೂನ್ 30ರಂದು ಶಿವಕುಮಾರ್ ಹೊಸಮನಿ ರಸಗೊಬ್ಬರ ತರಲು ನಗರಕ್ಕೆ ಆಗಮಿಸಿದ್ದರು. ಮರಳಿ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅಶೋಕ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕಳೆದ ಶುಕ್ರವಾರ ಆತನ ಶವವು ಹಾವನೂರು ಗ್ರಾಮದಲ್ಲಿ ಪತ್ತೆಯಾಯಿತು. ಅನುಮಾನಸ್ಪದ ಸಾವಿನ ಕುರಿತು ಕುಟುಂಬಸ್ಥರು ಕೊಲೆಯ ಕುರಿತು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

Related Articles

Leave a Reply

Your email address will not be published. Required fields are marked *

Back to top button