ಕಲಬುರಗಿಯಲ್ಲಿ ನಾಳೆ ನಾಡೋಜ್ ಖಂಡೇರಾವ್ ಅವರ ‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆ
ಅಕ್ಟೋಬರ್ ೨೪ರಂದು ಪುಸ್ತಕ ಬಿಡುಗಡೆ, ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಕಲಬುರಗಿ, ಅ. ೨೨: ನಗರದ ಸೇಡಂ ರಸ್ತೆಯಲ್ಲಿರುವ ಹಳೆಯ ಪ್ರಾದೇಶಿಕ ಸಾರಿಗೆ ಕಚೇರಿ ಎದುರಿನ ಚಂದ್ರಶೇಖರ ಪಾಟೀಲ ವಿದ್ಯಾರ್ಥಿನಿಲಯದ ಆವರಣದಲ್ಲಿರುವ ಎಂಆರ್‌ಎಂಸಿ ಸ್ಯಾಕ್ ಕಟ್ಟಡದಲ್ಲಿ ಅಕ್ಟೋಬರ್ ೨೪ರಂದು ಶನಿವಾರ ಬೆಳಿಗ್ಗೆ ೧೦.೩೦ಕ್ಕೆ ಹಿರಿಯ ಚಿತ್ರಕಲಾವಿದ ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಅವರ ‘ಅಮೂರ್ತ ಧ್ಯಾನ’ ಗ್ರಂಥ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಪ್ರತಿಷ್ಠಾನದ ಅಧ್ಯಕ್ಷ ಡಾ. ಪ್ರಭುರಾಜ್ ಬಿ. ಕಾಂತಾ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಲಲಿತಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಎಂ.ಎಸ್. ಮೂರ್ತಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ರಾಧಾಕೃಷ್ಣ ದೊಡ್ಡಮನಿ ಗ್ರಂಥ ಬಿಡುಗಡೆ ಮಾಡಲಿದ್ದು, ರಾಜ್ಯದ ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಲಿದ್ದಾರೆ ಎಂದು ವಿವರಿಸಿದರು.
ಧಾರ್ಮಿಕ ಗಣ್ಯರ ಸಾನ್ನಿಧ್ಯ
ಸಮಾಧಾನದ ಮೌನ ತಪಸ್ವಿ ಜಡೆ ಶಾಂತಲಿಂಗೇಶ್ವರ ಮಹಾಸ್ವಾಮೀಜಿ, ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್. ಅಪ್ಪ ಅವರು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಹಿರಿಯ ಚಿತ್ರಕಲಾವಿದ ಡಾ. ಸಿ. ಚಂದ್ರಶೇಖರ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ಗ್ರಂಥದ ಕುರಿತು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅಧ್ಯಾಪಕ ಪ್ರೊ. ವಿಕ್ರಮ್ ವಿಸಾಜಿ ಮಾತನಾಡಲಿದ್ದಾರೆ. ನಾಡೋಜ್ ಡಾ. ಜೆ.ಎಸ್. ಖಂಡೇರಾವ್ ಅವರು ಗೌರವ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಗಣ್ಯರು ಭಾಗಿ
ಮುಖ್ಯ ಅತಿಥಿಗಳಾಗಿ ವಿಕಾಸ ಅಕಾಡೆಮಿಯ ಸಂಸ್ಥಾಪಕ ಹಾಗೂ ಮಾಜಿ ಸಂಸದ ಡಾ. ಬಸವರಾಜ್ ಪಾಟೀಲ ಸೇಡಂ, ಹಿರಿಯ ಶಿಲ್ಪಕಲಾವಿದ ವೆಂಕಟಾಚಲಪತಿ, ಹಿರಿಯ ವೈದ್ಯ ಸಾಹಿತಿ ಡಾ. ಪಿ.ಎಸ್. ಶಂಕರ, ಖ್ಯಾತ ಚಿತ್ರಕಲಾವಿದ ಡಾ. ವಿ.ಜಿ. ಅಂದಾನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಚಿರಂಜೀವಿ ಸಿಂಗ್, ನ್ಯಾಯಮೂರ್ತಿ ಶಿವರಾಜ್ ಪಾಟೀಲ, ಪ.ಸ. ಕುಮಾರ, ಡಾ. ಸಂಜೀವ ಕಿಶೋರ್, ಗೌತಮ್, ಪದ್ಮಶ್ರೀ ಅದ್ವೈತ ಚರಣ್ ಗಡನಾಯಕ, ಪದ್ಮಶ್ರೀ ವಾಸುದೇವ ಕಾಮತ್, ಮ.ಗು. ಬಿರಾದಾರ, ಎ.ಕೆ. ರಾಮೇಶ್ವರ, ಡಾ. ಎ.ಎಸ್. ಪಾಟೀಲ, ಎಸ್.ಜಿ. ವಾಸುದೇವ್, ಕೆ.ವಿ. ಸುಬ್ರಹ್ಮಣ್ಯಂ, ಅನಿಲ್ ನಾಯಕ್, ರಾಜೇಂದ್ರ ಪಾಟೀಲ, ಪ್ರೊ. ವಿಶ್ವನಾಥ ಸಾಬಳೆ, ರೇಖಾ ಹೆಬ್ಬಾರರಾವ್, ಡಾ. ಸುಚೇತಾ ಪಿ. ಕಾಂತಾ, ಎನ್.ಎಸ್. ದೇವರಕಲ್, ಟಿ.ವಿ. ಶಿವಾನಂದನ್, ಅಜಿಂಕ್ಯ ಚಾವಳ್ಕರ್ ಹಾಗೂ ಕೃಷ್ಣ ರಾಯಚೂರು ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸೃಜನಶೀಲ ಕ್ಷೇತ್ರದ ಗಣ್ಯರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಗ್ರಂಥದ ಲೇಖಕ ಡಾ. ಅಶೋಕ್ ಶೆಟ್ಕರ್, ಓಂ ಪ್ರಿಂಟರ್ಸ್‌ನ ನೀಲಕಂಠ ಸಿ. ಬಿರಾದಾರ, ಗ್ರಂಥ ವಿನ್ಯಾಸಕಾರ ರಾಮಲಿಂಗ ಬೆಳಕೋಟೆ ಹಾಗೂ ಹಿರಿಯ ಶಿಲ್ಪಕಲಾವಿದ ಮಾನಯ್ಯ ಬಡಿಗೇರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಸೀತನೂರ, ನಾರಾಯಣ ಎಂ. ಜೋಶಿ, ಬಸವರಾಜ್ ಜಿ. ಖಂಡೇರಾವ್, ಅಶೋಕ್ ಶೆಟ್ಕರ್ ಹಾಗೂ ಡಾ. ಪರಶುರಾಮ್ ಪಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.



