Uncategorizedಕ್ರೀಡೆ

ಅರ್ಜುಣಗಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಬಾಲಕಿಯರ ವಾಲಿಬಾಲ ತಂಡವು ವಿಭಾಗಮಟ್ಟಕ್ಕೆ ಆಯ್ಕೆ

ಕಲಬುರಗಿ,ಸೆ.22-ಅಫಜಲಪುರ ತಾಲೂಕಿನ ಅರ್ಜುಣಗಿ (ಪಜಾ-304) ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕೀಯರ ವಾಲಿಬಾಲ ತಂಡವು ಮಂಗಳವಾರ (ಸೆಪ್ಟೆಂಬರ್ 22ರಂದು) ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು, ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದು, ಈ ವಾಲಿಬಾಲ್ ತಂಡದ ಸಾಧನೆಗೆ ಕಲಬುರಗಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಪ್ರೀತಿ ದೊಡ್ಡಮನಿ ಹರ್ಷ ವ್ಯಕ್ತಪಡಿಸಿರುತ್ತಾರೆ.

ಅದೇ ರೀತಿ ಈ ವಸತಿ ಶಾಲೆಯ ಪ್ರಾಂಶುಪಾಲರಾದ ಶರಣಬಸಪ್ಪ ಪಾಟೀಲ್, ತರಬೇತಿದಾರ ರಾಜಶೇಖರ ಕುಂಬಾರ, ತಂಡದ ಮ್ಯಾನೇಜರ್ ಹಾಗೂ ಗಣಕಯಂತ್ರ ಶಿಕ್ಷಕರಾದ ಶಿವರಾಜ, ಚಿತ್ರಕಲಾ ಶಿಕ್ಷಕ ವಿನೋದಕುಮಾರ ಜೇವೂರ ಹಾಗೂ ಕನ್ನಡ ಭಾಷೆ ಶಿಕ್ಷಕಿ ಜೈನಾಬಿ ಸೇರಿದಂತೆ ವಸತಿ ಶಾಲೆಯ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button