ಆರೋಗ್ಯ

ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ನಾರಾಯಣ ಗುರು ಹಾಗೂ ನೂಲಿಯ ಚಂದಯ್ಯ ಜಯಂತಿ ಆಚರಣೆ

ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗಣ್ಯರಿಂದ ಗೌರವ ನಮನ

ಕಲಬುರಗಿ, ಆ.28: ನಗರದ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞರ ಕೊಠಡಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿ ಹಾಗೂ ದಾಸೋಹಿ, ಜ್ಞಾನಿ, ಕಾಯಕಯೋಗಿ ಶರಣ ನೂಲಿಯ ಚಂದಯ್ಯ ಜಯಂತಿಯನ್ನು ಆಚರಿಸಲಾಯಿತು.

ಜಿಲ್ಲಾ ಶಸ್ತ್ರಜ್ಞರು ಹಾಗೂ ಅಧೀಕ್ಷಕರಾದ ಡಾ. ರೂಕೀಯ ಆಸ್ನಾ ರಬಾ ಅವರು ನಾರಾಯಣ ಗುರು ಹಾಗೂ ಶರಣ ನೂಲಿಯ ಚಂದಯ್ಯ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಓಪಿಡಿ ಸರ್ಜನ್ ಡಾ. ಶಾಲನಿ ಸಜ್ಜನಶೆಟ್ಟಿ, ಸ್ಥಳೀಯ ವೈದ್ಯಾಧಿಕಾರಿಗಳಾದ ಡಾ. ನಾಗರಾಜ್ ಪಾಟೀಲ, ಡಾ. ಸಂತೋಷ್ ಕಟ್ಟಿಮನಿ, ಡಾ. ಪ್ರತಿಭಾ, ಮುಖ್ಯ ವೈದ್ಯಾಧಿಕಾರಿ ಡಾ. ವಿನೋದ್ ಕುಮಾರ್ ಹೊಸಳ್ಳಿ, ಕಚೇರಿ ಸಹಾಯಕ ಆಡಳಿತಾಧಿಕಾರಿ ಅಂಬಾರಾಯ ಸಂಕಾ, ಕಚೇರಿ ಅಧೀಕ್ಷಕಿ ಸಂಗೀತಾ, ಎಚ್‌ಎಫ್‌ಡಬ್ಲ್ಯೂ ಸಿಬ್ಬಂದಿ ಇಮ್ತಿಯಾಜ್ ಅಲಿ, ಎಫ್‌ಡಿಎ ಕಾವ್ಯ ಹನಚೇಟಕಿ, ಶಿಬಾರಾಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಲ್ಲಾ ತಂಬಾಕು ವ್ಯಸನಮುಕ್ತ ಕೇಂದ್ರದ ಮನೋವೈದ್ಯಕೀಯ ಸಲಹೆಗಾರ ಮಂಜುನಾಥ ಕಂಬಾಳಿಮಠ, ಎನ್‌ಎಚ್‌ಎಂ ಲೆಕ್ಕಪರಿಶೋಧಕ ಸಿದ್ದಪ್ಪ ಹಾಲಪ್ಪನೂರ, ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಮಲ್ಲಪ್ಪ ಬುಕ್ಕಾ, ಸರ್ಕಾರಿ ನೌಕರರ ಸಂಘದ ಕ್ರೀಡಾ ಕಾರ್ಯದರ್ಶಿ ರಾಚಣ್ಣ ಬಿಸಿಗೊಂಡ, ಅವಿನಾಶ್ ಪಾಟೀಲ, ಶರಣು, ಪೃಥ್ವಿ ಸೇರಿದಂತೆ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ವಿವಿಧ ವಿಭಾಗಗಳ ಆರೋಗ್ಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button