ಸಂಪಿಗೆ ನಗರದಲ್ಲಿ ಇಂದಿನಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣ ಆರಂಭ
ಆ.12ರಿಂದ ಸೆ.11ರವರೆಗೆ ಪ್ರತಿದಿನ ಸಂಜೆ 7.30ರಿಂದ ಧಾರ್ಮಿಕ ಪ್ರವಚನಕಲಬುರಗಿ, ಆ.11: ಪ್ರತಿವರ್ಷದಂತೆ ಶ್ರಾವಣ ಮಾಸದ ಅಂಗವಾಗಿ ಸಂಪಿಗೆ ನಗರ, ಹಳೆ ಜೆವರ್ಗಿ ರಸ್ತೆಯ ಶ್ರೀ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಈಶ್ವರ ದೇವಸ್ಥಾನ ಸಮಿತಿ ಸಂಪಿಗೆನಗರದ ಅಧ್ಯಕ್ಷ ರಾಜಶೇಖರ ಪಾಟೀಲ, ಕಾರ್ಯದರ್ಶಿ ಚಂದ್ರಕಾಂತ ಎಸ್. ಗುತೇದಾರ ಹಾಗೂ ಪುರಾಣ ಅಧ್ಯಕ್ಷ ಚಂದ್ರಶೇಖರ ಮಡಿವಾಳ ತಿಳಿಸಿದ್ದಾರೆ. ಆಗಸ್ಟ್ 12ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿರುವ ಮಹಾಪುರಾಣ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9.30ರವರೆಗೆ ಧಾರ್ಮಿಕ ಪುರಾಣ ಪ್ರವಚನ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ವೀರೇಶ ಶಾಸ್ತ್ರಿಗಳು ಮಲ್ಲಕೂಡ ಅವರ ಅಮೃತವಾಣಿಯ ಮೂಲಕ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ, ಆದರ್ಶ ಹಾಗೂ ಧಾರ್ಮಿಕ ಸಂದೇಶಗಳನ್ನು ಭಕ್ತರಿಗೆ ತಿಳಿಸಿಕೊಡಲಿದ್ದಾರೆ. ಪುರಾಣ ಕಾರ್ಯಕ್ರಮದ ನಂತರ ಪ್ರತಿದಿನ ದಾಸೋಹ ವ್ಯವಸ್ಥೆ ಇರಲಿದೆ. ವಿವಿಧ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಹಾಪುರಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.

ಕಲಬುರಗಿ, ಆ.11: ಪ್ರತಿವರ್ಷದಂತೆ ಶ್ರಾವಣ ಮಾಸದ ಅಂಗವಾಗಿ ಸಂಪಿಗೆ ನಗರ, ಹಳೆ ಜೆವರ್ಗಿ ರಸ್ತೆಯ ಶ್ರೀ ಈಶ್ವರ ದೇವಸ್ಥಾನ ಸಮಿತಿ ವತಿಯಿಂದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಮಹಾಪುರಾಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಈಶ್ವರ ದೇವಸ್ಥಾನ ಸಮಿತಿ ಸಂಪಿಗೆನಗರದ ಅಧ್ಯಕ್ಷ ರಾಜಶೇಖರ ಪಾಟೀಲ, ಕಾರ್ಯದರ್ಶಿ ಚಂದ್ರಕಾಂತ ಎಸ್. ಗುತೇದಾರ ಹಾಗೂ ಪುರಾಣ ಅಧ್ಯಕ್ಷ ಚಂದ್ರಶೇಖರ ಮಡಿವಾಳ ತಿಳಿಸಿದ್ದಾರೆ.
ಆಗಸ್ಟ್ 12ರಿಂದ ಸೆಪ್ಟೆಂಬರ್ 11ರವರೆಗೆ ನಡೆಯಲಿರುವ ಮಹಾಪುರಾಣ ಕಾರ್ಯಕ್ರಮದಲ್ಲಿ ಪ್ರತಿದಿನ ಸಂಜೆ 7.30ರಿಂದ ರಾತ್ರಿ 9.30ರವರೆಗೆ ಧಾರ್ಮಿಕ ಪುರಾಣ ಪ್ರವಚನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಶ್ರೀ ವೀರೇಶ ಶಾಸ್ತ್ರಿಗಳು ಮಲ್ಲಕೂಡ ಅವರ ಅಮೃತವಾಣಿಯ ಮೂಲಕ ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜೀವನ, ಆದರ್ಶ ಹಾಗೂ ಧಾರ್ಮಿಕ ಸಂದೇಶಗಳನ್ನು ಭಕ್ತರಿಗೆ ತಿಳಿಸಿಕೊಡಲಿದ್ದಾರೆ.
ಪುರಾಣ ಕಾರ್ಯಕ್ರಮದ ನಂತರ ಪ್ರತಿದಿನ ದಾಸೋಹ ವ್ಯವಸ್ಥೆ ಇರಲಿದೆ. ವಿವಿಧ ಗಣ್ಯರು ಹಾಗೂ ಧಾರ್ಮಿಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮಹಾಪುರಾಣ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಧಾರ್ಮಿಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.



