ಅಪರಾಧ
ಆಸ್ಪತ್ರೆ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ
ಶಾಂತಿನಗರದ ಜೀವನಜ್ಯೋತಿ ಆಸ್ಪತ್ರೆ ಎದುರು ನಿಲ್ಲಿಸಿದ್ದ ₹65 ಸಾವಿರ ಮೌಲ್ಯದ ಪಲ್ಸರ್ ಬೈಕ್ ನಾಪತ್ತೆ

ನಗರದ ಶಾಂತಿನಗರದಲ್ಲಿರುವ ಜೀವನಜ್ಯೋತಿ ಆಸ್ಪತ್ರೆ ಎದುರು ನಿಲ್ಲಿಸಲಾಗಿದ್ದ ಬಜಾಜ್ ಪಲ್ಸರ್ ಬೈಕ್ ಕಳ್ಳತನವಾಗಿರುವ ಘಟನೆ ವರದಿಯಾಗಿದೆ.
ಆಳಂದ ತಾಲೂಕಿನ ಜವಳಿ (ಡಿ) ಗ್ರಾಮದ ಮೂಲದ ಹಾಗೂ ಪ್ರಸ್ತುತ ಶಾಂತಿನಗರ ನಿವಾಸಿಯಾಗಿರುವ ಸಾಗರ್ ತಂದೆ ರಮೇಶ್ ಮಂಜುಳಕರ ಅವರಿಗೆ ಸೇರಿದ ಸುಮಾರು ₹65 ಸಾವಿರ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಕಳುವಾಗಿದೆ.
ಜುಲೈ 16ರಂದು ಬೈಕ್ ಅನ್ನು ಆಸ್ಪತ್ರೆ ಎದುರು ನಿಲ್ಲಿಸಿದ್ದ ವೇಳೆ ಕಳ್ಳತನ ನಡೆದಿದೆ. ಬಳಿಕ ಎಲ್ಲೆಡೆ ಹುಡುಕಿದರೂ ಬೈಕ್ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



