
ಭಿಕ್ಷುಗಳಿಗೆ ಮಾಸಿಕ ₹6 ಸಾವಿರ ಗೌರವಧನ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಜೇವರ್ಗಿ ತಾಲೂಕು ಬೌದ್ಧ ಮಹಾಸಭೆ ಸ್ವಾಗತಿಸಿದೆ.
ತಾಲೂಕು ಬೌದ್ಧ ಮಹಾಸಭೆಯ ಅಧ್ಯಕ್ಷ ಮಲ್ಲಣ್ಣ ಕೊಡಚಿ ಮಾತನಾಡಿ, ಭಿಕ್ಷುಗಳ ಜೀವನೋಪಾಯಕ್ಕೆ ನೆರವಾಗುವ ಈ ಕ್ರಮ ಶ್ಲಾಘನೀಯವಾಗಿದ್ದು, ಸಮಾಜದ ದುರ್ಬಲ ವರ್ಗಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲದ ಪ್ರತೀಕವಾಗಿದೆ ಎಂದು ಹೇಳಿದರು.
ಈ ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಸಂಬಂಧಿಸಿದ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.



