ರಾಜ್ಯಸಮಾಜ

ಭಿಕ್ಷುಗಳಿಗೆ ಮಾಸಿಕ ₹6 ಸಾವಿರ ಗೌರವಧನ: ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಾಗತ

ಬೌದ್ಧ ಮಹಾಸಭೆಯಿಂದ ಸರ್ಕಾರಕ್ಕೆ ಅಭಿನಂದನೆ • ಸಾಮಾಜಿಕ ಭದ್ರತೆಗೆ ಮಹತ್ವದ ಹೆಜ್ಜೆ ಎಂದ ಅಧ್ಯಕ್ಷ ಮಲ್ಲಣ್ಣ ಕೊಡಚಿ

ಭಿಕ್ಷುಗಳಿಗೆ ಮಾಸಿಕ ₹6 ಸಾವಿರ ಗೌರವಧನ ನೀಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಜೇವರ್ಗಿ ತಾಲೂಕು ಬೌದ್ಧ ಮಹಾಸಭೆ ಸ್ವಾಗತಿಸಿದೆ.

ತಾಲೂಕು ಬೌದ್ಧ ಮಹಾಸಭೆಯ ಅಧ್ಯಕ್ಷ ಮಲ್ಲಣ್ಣ ಕೊಡಚಿ ಮಾತನಾಡಿ, ಭಿಕ್ಷುಗಳ ಜೀವನೋಪಾಯಕ್ಕೆ ನೆರವಾಗುವ ಈ ಕ್ರಮ ಶ್ಲಾಘನೀಯವಾಗಿದ್ದು, ಸಮಾಜದ ದುರ್ಬಲ ವರ್ಗಗಳಿಗೆ ಸರ್ಕಾರ ನೀಡುತ್ತಿರುವ ಬೆಂಬಲದ ಪ್ರತೀಕವಾಗಿದೆ ಎಂದು ಹೇಳಿದರು.

ಈ ಮಹತ್ವದ ನಿರ್ಧಾರ ಕೈಗೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹಾಗೂ ಸಂಬಂಧಿಸಿದ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button