ಜಿಲ್ಲಾಸುದ್ದಿ

ಶರಣರ ಜ್ಞಾನ ಭಂಡಾರವನ್ನು ಜಗತ್ತಿಗೆ ಪರಿಚಯಿಸಿದ ‘ ವಚನ ಪಿತಾಮಹ ‘ ಡಾ. ಫ.ಗು. ಹಳಕಟ್ಟಿ

ಕಲಬುರಗಿ, ಜುಲೈ, 02- ಪ್ರಸಿದ್ಧ ಸಾಹಿತಿ ಬಿ. ಎಂ. ಶ್ರೀಕಂಠಯ್ಯನವರು ವಿಜಯಪುರಕ್ಕೆ ಬಂದಾಗ, ಶರಣರ ಜ್ಞಾನದ ರಾಶಿಯನ್ನು ಕಷ್ಟಪಟ್ಟು ಸಂಗ್ರಹಿಸಿ, ನಾಡಿಗೆ ಉಣಬಡಿಸಿದ ‘ವಚನ ಪಿತಾಮಹ’ ಡಾ. ಫ.ಗು. ಹಳಕಟ್ಟಿ ಎಂದು ಮಹಾರಾಷ್ಟ್ರ ಸೋಲಾಪುರ ಜಿಲ್ಲೆಯ ಅಕ್ಕಲಕೋಟ್ ತಾಲ್ಲೂಕಿನ ಷಬ್ರಡಾ: ಶ್ರೀ ಅಭಿನವ ರಾಮಲಿಂಗ ಪಟ್ಟದೇವರು (ಡಾ. ಈಶ್ವರಾನಂದ ಮಹಾಸ್ವಾಮಿಗಳು ) ಶ್ರೀ ರಾಮಲಿಂಗ ಶಿವಶರಣ ಮಠ, ಸಾ. ಮು. ಸಲಗರ, ಪ.ಬ್ರ.ಡಾ. ಶ್ರೀ ಅಭಿನವ ರಾಮಲಿಂಗ ಪಟ್ಟದೇವರು ಅವರು ವಿಶೇಷ ಉಪನ್ಯಾನಸ ನೀಡಿ ಮಾತನಾಡಿದರು.

ಗುರುವಾರ ನಗರದ ಎಸ್.ಎಮ್.ಪಂಡಿತ ರಂಗಮಂದಿರ ರಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಾ. ಫ.ಗು ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತಾನಾಡಿದರು.

ಹಳಕಟ್ಟಿಯವರು ಧಾರವಾಡದಲ್ಲಿ ಜನಿಸಿ, ವಕೀಲಿ ವೃತ್ತಿ ಆರಂಭಿಸಿದ ಇವರು ಬಿಜಾಪುರಕ್ಕೆ ಸ್ಥಳಾಂತರಗೊಂಡಾಗ, ಮನೆಯೊಂದರ ಜಗಲಿಯಲ್ಲಿದ್ದ ಅಲ್ಲಮಪ್ರಭುಗಳ ತಾಡೋಲೆಗಳನ್ನು ಕಂಡು ಪ್ರೇರಿತರಾದರು.ಅಂದಿನ ಕಾಲದಲ್ಲಿ ಕೇವಲ ಪೂಜಾ ವಸ್ತುವಾಗಿದ್ದ ವಚನ ಕಟ್ಟುಗಳನ್ನು ಕಷ್ಟಪಟ್ಟು ಸಂಗ್ರಹಿಸಿ, ಪರಿಷ್ಕರಿಸಿ ಮುದ್ರಿಸುವ ಮೂಲಕ ಬಸವಣ್ಣ ಹಾಗೂ ಶರಣರ ವಿಚಾರಧಾರೆಗಳನ್ನು ಜಗತ್ತಿಗೆ ಪರಿಚಯಿಸಿದರು.


ಮಂಗಳೂರಿನ ಮುದ್ರಣಾಲಯ ವಚನ ಮುದ್ರಣಕ್ಕೆ ನಿರಾಕರಿಸಿದಾಗ ಧೃತಿಗೆಡದ ಅವರು, 1923 ರಿಂದ 1953 ರವರೆಗೆ ‘ವಚನಶಾಸ್ತ್ರ ಸಾರ’, ‘ಮಹಾದೇವಿಯಕ್ಕಗಳ ಗ್ರಂಥ’ ಸೇರಿದಂತೆ ಅನೇಕ ಕೃತಿಗಳನ್ನು ಹೊರತಂದರು ನಂತರ ವಿಜಯಪುರದಲ್ಲಿ ತಾವೇ ಸ್ವತಃ “ಹಿತಚಿಂತಕ” ಮುದ್ರಣಾಲಯ ಸ್ಥಾಪಿಸಿದರು ಎಂದು ಸ್ಮರಿಸಿದರು.

ತಮ್ಮ ಜೀವನದ 17 ವರ್ಷಗಳ ನಿರಂತರ ಹೋರಾಟದ ಮೂಲಕ 200ಕ್ಕೂ ಹೆಚ್ಚು ಅಪ್ರಸಿದ್ಧ ವಚನಕಾರರನ್ನು, 22 ಸಾವಿರಕ್ಕೂ ಅಧಿಕ ವಚನಗಳನ್ನು ಪರಿಷ್ಕರಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದರು.

ಹಿರಿಯ ಸಾಹಿತಿ ಅಪ್ಪಾರಾವ್ ಅಕ್ಕೋಣೆ ಅವರು ಮಾತನಾಡಿ, 12ನೇ ಶತಮಾನದ ಶರಣರ ವಚನ ಸಾಹಿತ್ಯಕ್ಕೆ ಮರುಜೀವ ನೀಡಿದ ಮಹಾಚೇತನ, ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದ ಇವರು, ಬಾಂಬೆ ವಿಧಾನ ಪರಿಷತ್ ಸದಸ್ಯರಾಗಿ ಹಾಗೂ ಬಿಜಾಪುರ ನಗರಸಭೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇವರ ಜನಪರ ಕಾರ್ಯಗಳನ್ನು ಗೌರವಿಸಿ ಬ್ರಿಟಿಷ್ ಸರ್ಕಾರ ಇವರಿಗೆ “ರಾವ್ ಬಹದ್ದೂರ್” ಪ್ರಶಸ್ತಿ ನೀಡಿ ಗೌರವಿಸಿತ್ತು. ಕನ್ನಡ ಸಾಂಸ್ಕೃತಿಕ ಪರಂಪರೆಗೆ ಇವರ ಕೊಡುಗೆ ಅಪೂರ್ವವಾಗಿದೆ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಜಗದೀಶ್ವರಿ ನಾಶಿ ಅವರು ಸ್ವಾಗತಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಹಾಯಕರಾದ ಶಿವಪ್ರಭು ಹಿರೇಮಠ,ವೇದಿಕೆ ಮೇಲೆ ಸಮಾಜದ ಮುಖಂಡರಾದ ಚೆನ್ನಾಮಲ್ಲಪ್ಪ, ಡಾ.ಬಸವರಾಜ ಚೆನ್ನ, ಸತೀಶ್ ಜಮಖಂಡಿ, ಚಂದ್ರಶೇಖರ, ಸೋಮಶೇಖರ್. ಬಿ. ಧತ್ತರ್ಗಿ, ಶ್ರವಣ ಕುಮಾರ,ಸಿದ್ದರೂಢ ಮುನ್ನಳ್ಳಿ, ಚಂದ್ರಕಾಂತ ಮುನ್ನಳ್ಳಿ ಇತರರು ಉಪಸ್ಥಿತರಿದ್ದರು.

ಕಲಬುರಗಿ ನಗರದ ಸರ್ದಾರ್ ವಲ್ಲಬಾಯ್ ಪಟೇಲ್ ವೃತ್ತದಿಂದ ರಂಗಮಂದಿರವರೆಗೆ ಫ.ಗು. ಹಳಕಟ್ಟಿ ಅವರ ಭಾವಚಿತ್ರ ಹಾಗೂ ವಚನ ಸಾಹಿತ್ಯವನ್ನು ಆನೆಯ ಮೇಲೆ ಮೆರವಣಿಗೆಗೆ ವಿಧಾನ ಪರಿಷತ್ ಶಾಸಕ ಶಶೀಲ್ ಜಿ. ನಮೋಶಿ ಕರ್ನಾಟಕ ರಾಜ್ಯ ಧ್ವಜ ತೋರಿಸುವುದರ ಮೂಲಕ ಚಾಲನೆ ನೀಡಿದರು. ಶಿವರಾಜ್ ಅಂಡಗಿ, ವಿನೋದ್ ಕುಮಾರ್ ಜನವರಿ, ಚನ್ನಮಲ್ಲಪ್ಪ ಯಳಸಂಗಿ, ಸತೀಶ್ ಜಮಖಂಡಿ, ಶ್ರೀನಿವಾಸ್ ಬಲ್ಪುರ್, ಚಂದ್ರಶೇಖರ್ ಮ್ಯಾಳಗಿ, ರಾಜು ಕೋಷ್ಟಿ, ಅನೇಕರಿದ್ದರು.

Related Articles

Leave a Reply

Your email address will not be published. Required fields are marked *

Back to top button