ಮನಸ್ಸನ್ನು ಶುಚಿಗೊಳಿಸುವ ಶಕ್ತಿ ಸಂಗೀತಕ್ಕಿದೆ: ನ್ಯಾಯವಾದಿ ಅಟ್ಟೂರ್

ಕಲಬುರ್ಗಿ, ಜೂ.೨೯- ಜಾತಿ, ಮತ, ಪಂಥವೆನ್ನದೆ ಸರ್ವರ ಮನಸ್ಸನ್ನು ಶುಚಿಗೊಳಿಸಿ ಒಂದು ಗುಡಿಸುವ ಶಕ್ತಿ ಸಂಗೀತಕ್ಕಿದೆ ಎಂದು ನ್ಯಾಯವಾದಿ ಹಣಮಂತರಾಯ ಅಟ್ಟೂರ್ ಅವರು ಹೇಳಿದರು.
ನಗರದ ಕೆ ಎಚ್ ಬಿ ಗ್ರೀನ್ ಪಾರ್ಕ್ ಬಡಾವಣೆಯಲ್ಲಿ ವಿಶ್ವ ಸಂಗೀತ ದಿನಾಚರಣೆ ನಿಮಿತ್ಯ ದಕ್ಷಿಣ ಮುಖಿ ಆಂಜನೇಯ ಭಜನಾ ಸಂಘ ಹಮ್ಮಿಕೊಂಡ ಸಂಗೀತ ಉತ್ಸವ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕೆಲವು ಸಂಘಗಳು ಯಾವುದೇ ಕಾರ್ಯಕ್ರಮ ಮಾಡದೇ ಕೇವಲ ಫೋಟೋಗಳನ್ನು ಕೊಟ್ಟು ಸರಕಾರದ ಕೆಲವು ಇಲಾಖೆಯಿಂದ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿರುವದು ವಿಷಾ ಧನಿಯ.ಇದರ ಬಗ್ಗೆ ಅಧಿಕಾರಿಗಳಿಗೆ ಗೊತ್ತಿದ್ದರು ಹಣ ಬಿಡುಗಡೆ ಮಾಡುತ್ತಿವೆ ಎಂದರು.
ಜನರಿಗೆ ಸಂಗೀತದ ಹಲವಾರು ಕಾರ್ಯಕ್ರಮ ಆಯೋಜನೆ ಗೊಳಿಸಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಸಂಘಗಳಿಗೆ ಸರಕಾರ ಧನ ಸಹಾಯ ಮಾಡುತ್ತದೆ. ಆದರೆ ಜನರ ಮಧ್ಯದಲ್ಲಿ ಕಾರ್ಯಕ್ರಮ ಮಾಡದೇ ಕೆಲವು ಸಂಘಗಳು ಕೇವಲ ಬ್ಯಾನರ್ ಹಾಗೂ ಭಾವಚಿತ್ರಕ್ಕೆ ಸೀಮಿತಗೊಳಿಸಿ ಸರ್ಕಾರದ ಹಣ ಲೂಟಿ ಮಾಡುತ್ತಿವೆ. ನಕಲಿ ಕಲಾವಿದರಿಗೆ ಸಹಾಯ ಬಿಟ್ಟು ಅಸಲಿ ಕಲಾವಿದರಿಗೆ ಗುರುತಿಸಿ ಸಹಾಯ ಮಾಡಲಿ. ಕಲಾವಿದರು ಹಗಲು ರಾತ್ರಿ ಎನ್ನದೆ ಸೇವೆ ಮಾಡುವ ರಾಷ್ಟ್ರದ ದೊಡ್ಡ ಶಕ್ತಿಯಾಗಿದ್ದಾರೆ. ಅವರನ್ನು ಗುರುತಿಸುವದು, ಗೌರವಿಸುವದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಎಷ್ಟೋ ಜನ ಕಲಾವಿದರ ಕುಟುಂಬ ನಿರ್ವಹಣೆ ಮಾಡುವದು ಕಷ್ಟವಾಗಿದೆ. ಇಂತಹ ಕಲಾವಿದರಿಗೆ ಗುರುತಿಸಿ ಸರಕಾರ ಸಹಾಯ ಮಾಡುವದರೊಂದಿಗೆ ಪ್ರತಿ ತಿಂಗಳ ಮಾಶಾಸನ ನೀಡಲಿ ಎಂದು ಅವರು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ದಿಲೀಪಕುಮಾರ್ ಭಕ್ರೆ, ಹಿರಿಯ ಸಂಗೀತ ಕಲಾವಿದರಾದ ಶಿವಣಗೌಡ ಪಾಟೀಲ್, ಆನಂದ ಪೂಜಾರಿ, ರವೀಂದ್ರ ಗುತ್ತೇದಾರ್ ಅವರು ಸಂಗೀತ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹಣಮಂತ ರೆಡ್ಡಿ, ಬಸವರಾಜ್ ರಟಗಲ್, ರಾಮದಾಸ್ ಪಾಟೀಲ್, ಬಸವರಾಜ್ ಬಿರಾದಾರ್, ಬಾಲಾಜಿ ರುದ್ರವಾಡಿ ಅವರೂ ಸೇರಿದಂತೆ ಅನೇಕ ಜನ ಭಾಗವಹಿಸಿದರು. ಇದೆ ಸಂಧರ್ಭದಲ್ಲಿ ಹಿರಿಯ ಸಂಗೀತ ಕಲಾವಿದರಾದ ಬಸಣ್ಣ ವಗ್ಗಾಲಿ ಮಾಶಾಳ್ ಅವರನ್ನು ಸನ್ಮಾನಿಸಲಾಯಿತು.



