ಜಿಲ್ಲಾಸುದ್ದಿ

ಪರಿಷತ್ ಸದಸ್ಯ ನಮೋಶಿ ಅವರಿಗೆ ಮಾತೃವಿಯೋಗ

ಕಲಬುರಗಿ, ಅ.5– ವಿಧಾನ ಪರಿಷತ್ ಸದಸ್ಯ ಹಾಗೂ ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿ ಅಧ್ಯಕ್ಷ ಶಶೀಲ್ ಜಿ. ನಮೋಶಿ ಅವರ ತಾಯಿ ಭೂದೇವಿ ಗಂಗಾಧರ ನಮೋಶಿ (94) ಅವರು ಶನಿವಾರ ರಾತ್ರಿ ನಿಧನರಾದರು.

ಮೃತರು ಶಶೀಲ್ ನಮೋಶಿ, ಅನಿಲ್ ನಮೋಶಿ ಸೇರಿದಂತೆ ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಭೂದೇವಿ ಅವರ ಪತಿ ಗಂಗಾಧರ ನಮೋಶಿ ಅವರು 1962ರಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಕಲಬುರಗಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಅವರ ಪುತ್ರ ಶಶೀಲ್ ಜಿ. ನಮೋಶಿ ಅವರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ನಂತರ ನಮೋಶಿ ಅವರು ಸಿಪಿಐ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದರು.

ಮೃತರ ಅಂತ್ಯಕ್ರಿಯೆ ನಗರದ ಶಹಾಬಾದ್ ರಸ್ತೆಯಲ್ಲಿರುವ ಅವರ ಹೊಲದಲ್ಲಿ ಭಾನುವಾರ ಸಂಜೆ ನೆರವೇರಿತು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಬಿಜೆಪಿ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ನಮೋಶಿ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಭೂದೇವಿ ಗಂಗಾಧರ ನಮೋಶಿ ಅವರ ನಿಧನಕ್ಕೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button