ಚಿತ್ತಾಪುರದ ಸ್ಟೇಷನ್ ತಾಂಡಾದಲ್ಲಿ ನವರಾತ್ರಿ ಉತ್ಸವಕ್ಕೆ ಸರ್ವ ಸಜ್ಜು

ಚಿತ್ತಾಪುರ, ಅ.2- ಪಟ್ಟಣದ ಸ್ಟೇಷನ್ ತಾಂಡಾದಲ್ಲಿ 26ನೇ ವರ್ಷದ ನವರಾತ್ರಿ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆಗಳು ಆರಂಭಗೊಂಡಿದ್ದು, ಎಂಟು ನಾಯಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನವರಾತ್ರಿ ಉತ್ಸವ ಸಮಿತಿಯ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಕಿಶನ್ ಹುನ್ನು ರಾಠೋಡ್, ಅಧ್ಯಕ್ಷರಾಗಿ ಜಗದೀಶ್ ಡಿ. ಚವಾಣ್, ಪ್ರಧಾನ ಕಾರ್ಯದರ್ಶಿಯಾಗಿ ಆಕಾಶ್ ಚವಾಣ್, ಕಾರ್ಯದರ್ಶಿಯಾಗಿ ಆನಂದ್ ಜಾಧವ್ ಆಯ್ಕೆಯಾದರು.
ಖಜಾಂಚಿಗಳಾಗಿ ವಿಶ್ವನಾಥ್ ರಾಠೋಡ್ ಹಾಗೂ ಜಗದೀಶ್ ಪವಾರ್, ಉಪಾಧ್ಯಕ್ಷರಾಗಿ ಸುನಿಲ್ ರಮೇಶ್ ರಾಠೋಡ್, ಗಣೇಶ್ ಚವಾಣ್, ತಿರುಪತಿ ರಾಠೋಡ್, ಕಪಿಲ್ ಪವಾರ್, ಪ್ರಕಾಶ್ ಜಾಧವ್ ಹಾಗೂ ಹೀರು ಚವಾಣ್ ಅವರನ್ನು ಆಯ್ಕೆ ಮಾಡಲಾಯಿತು.
ಸಹ ಕಾರ್ಯದರ್ಶಿಗಳಾಗಿ ಪ್ರಕಾಶ್ ನಾಯಕ, ಚಂದ್ರಕಾಂತ್ ಪವಾರ್, ಪ್ರೇಮ್ ಜಾಧವ್, ಶರಣು ಚವಾಣ್, ಗೋಪಿ ಚವಾಣ್ ಹಾಗೂ ಅಂಬದಾಸ್ ರಾಠೋಡ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಿಶನ್ ನಾಯಕ, ಕಿರಣ್ ಭೀಮಾ ನಾಯಕ, ಲಕ್ಷ್ಮಣ ವಿಠಲ್ ನಾಯಕ, ಮೋತಿಲಾಲ್ ಬಾಬು ನಾಯಕ, ದೇವಿದಾಸ್ ಭೀಕು ನಾಯಕ, ಚಂದು ನಾಯಕ, ರವೀಂದ್ರ ನಾಯಕ, ಪೆಮ್ಯಾ ನಾಯಕ, ಪೋಮು ಚವಾಣ್, ಗೋಪಾಲ್ ರಾಠೋಡ್, ಭೀಮಸಿಂಗ್ ಚವಾಣ್, ವಿನೋದ್ ಪವಾರ್, ರವಿ ಜಾಧವ್, ದೇವಿದಾಸ್ ಚವಾಣ್, ಶ್ರೀಕಾಂತ್ ರಾಠೋಡ್, ಪ್ರೇಮ್ ಚವಾಣ್, ಬಿಪಿನ್ ರಾಠೋಡ್, ಅನಿಲ್ ಚವಾಣ್, ಮೂರ್ತಿ ಚವಾಣ್, ಗೋಪಿ ಬಿ. ರಾಠೋಡ್, ವಿಜಯ್ ಚವಾಣ್ ಹಾಗೂ ಪ್ರೇಮ್ ಪವಾರ್ ಸೇರಿದಂತೆ ತಾಂಡಾದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರು ನವರಾತ್ರಿ ಉತ್ಸವವನ್ನು ಸಾಂಪ್ರದಾಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಯಶಸ್ವಿಯಾಗಿ ಆಚರಿಸಲು ಎಲ್ಲರ ಸಹಕಾರ ಕೋರಿದರು.



