ಕಲಬುರಗಿಯಲ್ಲಿ ನಾಳೆ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನ

ಕಲಬುರಗಿ, ಅ.2- ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಅ.4ರಂದು ಸಂಜೆ 6.30ಕ್ಕೆ ಪ್ರಕಾಶರಾಜ್ ಅವರ ನಿರ್ದೇಶನದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಮುದಾಯ ಜಿಲ್ಲಾ ಅಧ್ಯಕ್ಷ ಡಾ. ಶ್ರೀಶೈಲ ಘೂಳಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಲ ಪಂಚತಂತ್ರದ ಕಥೆಗಳನ್ನು ಆಧರಿಸಿ ನಾಟಕ ರೂಪದಲ್ಲಿ ‘ಪ್ರಾಜೆಕ್ಟ್ ಪಂಚತಂತ್ರ’ ಸಿದ್ಧಪಡಿಸಲಾಗಿದೆ. ರಂಗಪಠ್ಯ ಹಾಗೂ ನಿರ್ದೇಶನ ಅರುಣಲಾಲ್ ಅವರದು. ಖ್ಯಾತ ಸಾಹಿತಿ ಡಾ. ವಿಕ್ರಮ್ ವಿಸಾಜಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಡಾ. ಶಾಂತಾ ಅಷ್ಟಗಿ, ಮುನ್ನಾ ಧಾರವಾಡ, ಶ್ರೀಮತಿ ಸುಜಾತಾ ಜಂಗಮಶೆಟ್ಟಿ, ಶ್ರೀಮತಿ ಜಗದೇಶ್ವರಿ ಶಿವಕೇರಿ, ಬಸವರಾಜ ಉಪ್ಪಿನ್, ಬಿ.ಆರ್. ಬುದ್ಧ, ಶ್ಯಾಮ್ ನಾಟೀಕಾರ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ನಾಟಕ ಪ್ರದರ್ಶನದ ಹಿನ್ನೆಲೆಯಲ್ಲಿ ಕಲಾವಿದರು, ಸಾಹಿತ್ಯಾಸಕ್ತರು ಹಾಗೂ ರಂಗಭೂಮಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ, ಶಿವಶರಣಪ್ಪ ಮೂಳೇಗಾಂವ್, ಡಾ. ಅಶೋಕ ಶೆಟಕಾರ್, ನಾಗೇಂದ್ರಪ್ಪ ಅವರಾದಿ, ಬಸವರಾಜ ಉಪ್ಪಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



