ಜಿಲ್ಲಾಸುದ್ದಿ

ಮೆಣಸಿನಕಾಯಿ ಬೆಳೆಯ ಆರಂಭಿಕ ಹಂತದ ರಕ್ಷಣೆಗೆ ‘ಗೋದ್ರೆಜ್ ಗ್ರೇಸಿಯಾ’

ಯಾದಗಿರಿ, ಸೆ.26: ಮೆಣಸಿನಕಾಯಿ ಬೆಳೆಗಾರರಿಗೆ ಸಾಮಾನ್ಯ ಇಳುವರಿ ಮತ್ತು ಅತ್ಯುತ್ತಮ ಇಳುವರಿಯ ನಡುವಿನ ವ್ಯತ್ಯಾಸವು ನಾಟಿ ಮಾಡಿದ ಮೊದಲ ಕೆಲವು ವಾರಗಳಲ್ಲೇ ನಿರ್ಧಾರವಾಗುತ್ತದೆ. ಈ ಆರಂಭಿಕ ಹಂತದಲ್ಲಿ ಎದುರಾಗುವ ಕೀಟಬಾಧೆ, ಅದರಲ್ಲೂ ನುಸಿ (ಥ್ರಿಪ್ಸ್) ಸೇರಿದಂತೆ ಹೀರುವ ಕೀಟಗಳ ಹಾವಳಿ ಸಸಿಗಳ ಸುಸ್ಥಿರ ಬೆಳವಣಿಗೆ ಮೇಲೆ ತೀವ್ರ ಪರಿಣಾಮ ಬೀರಿ, ಒಟ್ಟಾರೆ ಇಳುವರಿ ಸಾಮರ್ಥ್ಯ ಕುಂಠಿತಗೊಳಿಸುತ್ತದೆ. ಹೀಗಾಗಿ ಆರಂಭಿಕ ಹಂತದಲ್ಲೇ ಬೆಳೆ ರಕ್ಷಣೆ ಅತ್ಯಂತ ನಿರ್ಣಾಯಕವಾಗಿದೆ ಎಂದು ಗೋದ್ರೆಜ್ ಅಗ್ರೋವೆಟ್ ಲಿಮಿಟೆಡ್ ತಿಳಿಸಿದೆ.

ತೀವ್ರ ಕೀಟಬಾಧೆಯ ಸಂದರ್ಭದಲ್ಲಿ ಶೇ.90ರಷ್ಟು ಇಳುವರಿ ನಷ್ಟವಾಗುವ ಸಾಧ್ಯತೆಯಿದ್ದು, ಆರಂಭಿಕ ಹಂತದಲ್ಲೇ ಸೂಕ್ತ ರಕ್ಷಣಾ ಕ್ರಮ ಕೈಗೊಳ್ಳುವ ಅಗತ್ಯವನ್ನು ಇದು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ ಗೋದ್ರೆಜ್ ಅಗ್ರೋವೆಟ್ ಲಿಮಿಟೆಡ್, ಮೆಣಸಿನಕಾಯಿ ಕೃಷಿಗಾಗಿ ರೂಪಿಸಿರುವ ಕೀಟನಾಶಕ ‘ಗ್ರೇಸಿಯಾ’ ಮೂಲಕ ಆರಂಭಿಕ ಬೆಳೆ ಸಂರಕ್ಷಣೆಯ ಮಹತ್ವ ಕುರಿತು ರೈತರಲ್ಲಿ ಜಾಗೃತಿ ಮೂಡಿಸುತ್ತಿದೆ.

ಸಸಿಗಳನ್ನು ನಾಟಿ ಮಾಡಿದ ಮೊದಲ 15ರಿಂದ 25 ದಿನಗಳು ಆರೋಗ್ಯಕರ ಬೆಳೆಗೆ ಭದ್ರ ಬುನಾದಿ ನಿರ್ಮಿಸುವ ಸೂಕ್ಷ್ಮ ಅವಧಿಯಾಗಿದೆ. ಈ ಹಂತದಲ್ಲಿ ಹೊರಗಿನಿಂದ ಯಾವುದೇ ಹಾನಿಯ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ನುಸಿ ಸೇರಿದಂತೆ ಕೆಲವು ಕೀಟಗಳು ಸಸಿಗಳ ಶಾರೀರಿಕ ಬೆಳವಣಿಗೆಗೆ ಧಕ್ಕೆ ತರಬಹುದು. ಆರಂಭಿಕ ಮುನ್ನೆಚ್ಚರಿಕಾ ಕ್ರಮಗಳು ಕೀಟಗಳ ಕಾಟವನ್ನು ಮೊದಲ ಹಂತದಲ್ಲೇ ನಿಯಂತ್ರಿಸಲು ಹಾಗೂ ಉತ್ತಮ ಇಳುವರಿ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತವೆ.

ಪ್ರತಿ ಎಕರೆಗೆ 160 ಮಿಲಿಲೀಟರ್ ಪ್ರಮಾಣದಲ್ಲಿ ಸಿಂಪಡಿಸಲು ಶಿಫಾರಸು ಮಾಡಲಾಗಿರುವ ಗ್ರೇಸಿಯಾದ ‘ಟ್ರಾನ್ಸ್ ಲ್ಯಾಮಿನಾರ್’ ತಂತ್ರಜ್ಞಾನವು ಎಲೆಯ ಮೇಲ್ಭಾಗದಿಂದ ಕೆಳಭಾಗದವರೆಗೆ ಪ್ರವೇಶಿಸಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಹೀರುವ ಹಾಗೂ ಕಚ್ಚಿ ತಿನ್ನುವ ಎರಡೂ ಬಗೆಯ ಕೀಟಗಳನ್ನು ನಿಯಂತ್ರಿಸಲು ನೆರವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಮೆಣಸಿನಕಾಯಿ ಬೆಳೆಯ ಆರಂಭಿಕ ಹಂತದ ರಕ್ಷಣೆಯ ಕುರಿತು ಮಾತನಾಡಿದ ಗೋದ್ರೆಜ್ ಅಗ್ರೋವೆಟ್ ಲಿಮಿಟೆಡ್‌ನ ಕ್ರಾಪ್ ಕೇರ್ ವಿಭಾಗದ ಸಿಇಒ ರಾಜವೇಲು ಎನ್.ಕೆ. ಅವರು, **“ಮೆಣಸಿನಕಾಯಿ ಕೃಷಿಯಲ್ಲಿ ನಾಟಿ ಮಾಡಿದ ಆರಂಭಿಕ ವಾರಗಳು ಬೆಳೆಯ ಭವಿಷ್ಯದ ಇಳುವರಿ ಮತ್ತು ಬೆಳವಣಿಗೆ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಆದ್ದರಿಂದ ಸಸಿಗಳ ರಕ್ಷಣೆ ಹಾಗೂ ನಿರೀಕ್ಷಿತ ಇಳುವರಿ ಕಾಪಾಡಿಕೊಳ್ಳಲು ಆರಂಭಿಕ ಕೀಟ ನಿರ್ವಹಣೆ ಅತ್ಯಗತ್ಯ. ಹಾನಿಯ ಲಕ್ಷಣಗಳು ಹೊರಗೆ ಕಾಣಿಸಿಕೊಳ್ಳುವ ಮುನ್ನವೇ ಕೀಟಗಳ ಬಾಧೆಯನ್ನು ನಿಯಂತ್ರಿಸಿ, ಮುಂದಿನ ಇಡೀ ಹಂಗಾಮಿಗೆ ಭದ್ರ ಅಡಿಪಾಯ ಹಾಕಲು ಗ್ರೇಸಿಯಾ ರೈತರಿಗೆ ನೆರವಾಗುತ್ತದೆ” ಎಂದರು.

ನಾಟಿಯ ನಂತರದ ನಿರ್ಣಾಯಕ 15ರಿಂದ 25 ದಿನಗಳ ಅವಧಿಯಲ್ಲಿ ಕೀಟಬಾಧೆಯನ್ನು ನಿಯಂತ್ರಿಸುವ ಮೂಲಕ ಗ್ರೇಸಿಯಾ ಬೆಳೆಯ ಆರೋಗ್ಯಕರ ಬೆಳವಣಿಗೆಗೆ ನೆರವಾಗುತ್ತದೆ. ಇದರಿಂದ ಬೆಳೆಗಾರರು ತಮ್ಮ ಇಳುವರಿಯನ್ನು ಗರಿಷ್ಠಗೊಳಿಸಲು ಹಾಗೂ ಸಂಪೂರ್ಣ ಹಂಗಾಮನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯವಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button