ಜೇವರ್ಗಿಯಲ್ಲಿ ನಾಳೆ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ

ಜೇವರ್ಗಿ, ಸೆ.24: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಅಕ್ಕಮಹಾದೇವಿ ಕದಳಿ ವೇದಿಕೆ ಸಹಯೋಗದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಶಿಕ್ಷಕರ ಕವಿಗೋಷ್ಠಿ ಕಾರ್ಯಕ್ರಮವನ್ನು ಸೆ.26ರಂದು ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಸಂಜೆ 4 ಗಂಟೆಗೆ ಆಯೋಜಿಸಲಾಗಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಕೆ. ಬಿರಾದಾರ ತಿಳಿಸಿದ್ದಾರೆ.
‘ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ’ ಆಶಯದೊಂದಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸುವುದರ ಜತೆಗೆ ಕನ್ನಡ ಸಾಹಿತ್ಯ, ಕಾವ್ಯ ಹಾಗೂ ಸಾಮಾಜಿಕ ಜಾಗೃತಿಗೆ ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸೊನ್ನದ ಡಾ. ಶಿವಾನಂದ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ರಾಜ್ಯ ವಿಧಾನ ಪರಿಷತ್ ಸದಸ್ಯ ಹಾಗೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತಹಶೀಲ್ದಾರ್ ಅಂಜುಮ ತಬಸುಮ್ ಹಾಗೂ ಸಿಪಿಐ ಬಾಪುಗೌಡ ಎಸ್. ಪಾಟೀಲ ಜ್ಯೋತಿ ಬೆಳಗಿಸಲಿದ್ದಾರೆ.
ಪ್ರಾಧ್ಯಾಪಕರಾದ ಡಾ. ಲಕ್ಷ್ಮೀಕಾಂತ ವಿ. ಹಾಗೂ ಪ್ರೊ. ಶಾಂತಪ್ಪ ಡಂಬಳ ಉಪನ್ಯಾಸ ನೀಡಲಿದ್ದಾರೆ.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ರಾಜ್ಯ ವಿಭಾಗೀಯ ಉಪಾಧ್ಯಕ್ಷ ನಿಜಲಿಂಗಪ್ಪ ಮಾನ್ವಿ, ಜಿಲ್ಲಾ ಸಹಕಾರ್ಯದರ್ಶಿ ದೇವೇಂದ್ರ ಎಸ್. ಒರಾಡ್, ತಾಲ್ಲೂಕು ರೆಡ್ ಕ್ರಾಸ್ ಸಂಘದ ಅಧ್ಯಕ್ಷ ಡಾ. ಪಿ.ಎಂ. ಮಠ, ತಾಲ್ಲೂಕು ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ದೇವೇಂದ್ರ ಗುಡೂರ್, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದಾನಪ್ಪಗೌಡ ಎಸ್. ಹಳಿಮನಿ, ಪಿಎಸ್‌ಐ ಮಹಿಬೂಬ್ ಅಲಿ, ಶ್ರೀಮತಿ ಮಮತಾ ಸುರೇಶಬಾಬು ಸಜ್ಜನ ಹಾಗೂ ಟಿಜಿಪಿಎಸ್‌ಎಂಎಸ್ ಉಪಾಧ್ಯಕ್ಷ ಮಹ್ಮದ್ ನೂರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಮುಖ್ಯ ಗುರುಗಳಾದ ಪೇಮಾ ಕ್ಯಾಬೇಜ್ ರಾಜು, ಎಐಎಫ್ ನಿವೃತ್ತ ಸೈನಿಕ ಖಾಜಾ ಪಟೇಲ್, ಶರಣಪ್ಪ ಮಂಟಾಳ ಹಾಗೂ ರಾಜಶೇಖರಯ್ಯ ಜಿ. ಸ್ವಾಮಿ ಕಬ್ಬರ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ವಿವಿಧ ಶಿಕ್ಷಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ 2026ನೇ ಸಾಲಿನ ಸಾರ್ಥಕ ಶಿಕ್ಷಕ ಪ್ರಶಸ್ತಿಗೆ ಡಾ. ಖಾಜಾವಲಿ, ಶ್ರೀಮತಿ ವೀಣಾ ಅಲಗೂಡಕರ್, ಡಾ. ಹೇಮಂತರಾಯ ಎಸ್. ರಾಮಪುರ, ಎಸ್. ಬಡದಾಳ, ಸಂತೋಷ ಹಿರೇಮಠ, ರಾಮನಗೌಡ ಎಸ್. ಮಣೂರು, ಶಿವಾನಂದ, ವಿದ್ಯಾಸಾಗರ ಎಸ್. ಶೂಳ, ಹಣಮಂತ ಚಾಂದ್ರೆ, ಶ್ರೀಮತಿ ಗೀತಾ ಎಸ್. ಅವರಾದ, ಶ್ರೀಮತಿ ನಂದಿನಿ ಬಿರಾದಾರ, ಶ್ರೀಮತಿ ಗೀತಾ ಕೆ.ಡಿ., ಶ್ರೀಮತಿ ಕುಸುಮಾ ಶರಣಪ್ಪ ಜೇವರ್ಗಿ, ರಾಜೇಂದ್ರಕುಮಾರ ಎಂ. ಮಠ, ಸುರೇಶಕುಮಾರ ಹಿರೇಮಠ, ಶ್ರೀಮತಿ ಶೃತಿ ಶರಣಪ್ಪ, ಯಮನಪ್ಪ ಡಿ. ಬಡದಾಳ, ಶಿಕ್ಷಕ ಬಸವರಾಜ, ಬಾಬುಗೌಡ ಎಸ್. ಪಾಟೀಲ ಜೇರಟಗಿ, ರಮೇಶ ಬಿರಾದಾರ ನೇದಲಗಿ, ಗೊಲ್ಲಾಳಪ್ಪ ಅರಳಗುಂಡಗಿ ಸೈದಾಪುರ, ಸೂರ್ಯಕಾಂತ ಎಸ್. ಬಂಡಿ ಹರಣೂರು ಹಾಗೂ ಚಿನ್ನುಪಟೇಲ್ ಕಮಲ ಪಾಟೀಲ ಜೇವರ್ಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಶಿಕ್ಷಕರ ಕವಿಗೋಷ್ಠಿ
ಕಾರ್ಯಕ್ರಮದ ಅಂಗವಾಗಿ ‘ಬರಗಾಲದ ಬವಣೆ ಮತ್ತು ರೈತರ ಆತ್ಮಸ್ಥೈರ್ಯ’ ಎಂಬ ಘೋಷವಾಕ್ಯದೊಂದಿಗೆ ಶಿಕ್ಷಕರ ಕವಿಗೋಷ್ಠಿ ನಡೆಯಲಿದೆ.
ಕವಿಗೋಷ್ಠಿಯಲ್ಲಿ ಡಾ. ಸಿದ್ದರಾಮಯ್ಯ ಎನ್. ಮಠ, ಶ್ರೀಮತಿ ಸುಧಾ ಬಿ. ಬೇಳೂರು, ಮಹಾಂತೇಶ ಪಾಟೀಲ ಯಾತನೂರು, ಸರೋಜಿನಿ ಎಸ್. ಹಳಿಮನಿ, ಮಲ್ಲಣ್ಣ ಚನ್ನಮಲ್ಲಪ್ಪಗೋಳ, ಜಗದೀಶ ನೇದಲಗಿ, ಶ್ವೇತಾ ಪ್ರಶಾಂತ ಜಮಖಂಡಿ ಬೇಳೂರು, ಶ್ರೀಮತಿ ಕಲಾವತಿ ಎಸ್.ಟಿ., ಮಲ್ಲಿಕಾರ್ಜುನ ಚೌದಯ್ಯಾಳ, ಶ್ರೀಮತಿ ಶೋಭಾ ಆರ್. ಗಣಗೇರ್, ಅರ್ಜುನ ಬಿ. ನಾಗಮಾನ ಹಾಗೂ ತುಕಾರಾಮ ಎಎಸ್‌ಐ ಜೇವರ್ಗಿ ಸೇರಿದಂತೆ ಹಲವು ಕವಿಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.



