ಜಿಲ್ಲಾಸುದ್ದಿ

ನರಿಬೋಳ್, ಚಾಮನೂರು ಸೇತುವೆ ವಿಳಂಬ: ನಾಳೆ ಮುಖ್ಯಮಂತ್ರಿಗಳಿಗೆ ಮುತ್ತಿಗೆ ನಿರ್ಧಾರ

ಕಲಬುರ್ಗಿ, ಸೆ.೧೫- ಕಲ್ಯಾಣ ಕರ್ನಾಟಕದ ಹೆಸರು ಬದಲಾಯಿತು ಹೊರತು ಅಭಿವೃದ್ಧಿ ಇಲ್ಲವಾಗಿದೆ. ಕಳೆದ ಒಂಭತ್ತು ವರ್ಷಗಳಿಂದ ಚಾಮನೂರು- ನರಿಬೋಳ್ ಸೇತುವೆ ಕಾಮಗಾರಿ ಕುಂಟುತ್ತ ಸಾಗಿದ್ದು, ಇದನ್ನು ಖಂಡಿಸಿ ಸೆಪ್ಟೆಂಬರ್ ೧೭ರಂದು ಗ್ರಾಮಸ್ಥರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವರು ಎಂದು ಹೋರಾಟಗಾರರಾದ ಎಂ.ಎಸ್. ಪಾಟೀಲ್ ನರಿಬೋಳ್, ಶರಣಗೌಡ ಪೋಲಿಸ್ ಪಾಟೀಲ್ ಅವರು ತಿಳಿಸಿದ್ದಾರೆ.

ಯಾವಾಗಲೋ ಸಿದ್ಧಗೊಳ್ಳಬೇಕಿದ್ದ ಸೇತುವೆಯು ಜನಪ್ರತಿನಿಧಿಗಳ ನಿರ್ಲಕ್ಷö್ಯದಿಂದ ಶೇಕಡಾ ೭೦ರಷ್ಟು ಆಗಿದ್ದ ಕಾಮಗಾರಿಯು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಹೋರಾಟ ಮಾಡಿದಾಗಲೊಮ್ಮೆ ಕೇವಲ ಭರವಸೆ ನೀಡುವ ಜನಪ್ರತಿನಿಧಿಗಳು ಕಾಮಗಾರಿಗೆ ನಿರ್ಲಕ್ಷö್ಯ ತೋರಿಸಿದ್ದಾರೆ. ಸೇತುವೆಯು ಪ್ರಭಾವಿ ಸಚಿವರುಗಳ ಕ್ಷೇತ್ರದಲ್ಲಿ ಬರುತ್ತಿದ್ದರೂ ಸಹ ನಿರ್ಲಕ್ಷö್ಯ ಮಾಡುತ್ತಿರುವುದರಿಂದ ಗ್ರಾಮಸ್ಥರು ರೋಸಿ ಹೋಗಿದ್ದಾರೆ. ಹೀಗಾಗಿ ಮುಖ್ಯಮಂತ್ರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button