ಜಿಲ್ಲಾಸುದ್ದಿ

ಹಿರಿಯ ನಾಗರಿಕರ ಕ್ರೀಡಾಕೂಟಕ್ಕೆ ಚಾಲನೆ ಉತ್ಸುಕತೆಯಿಂದ‌ ಭಾಗಿಯಾದ‌ ಹಿರಿಯ ಜೀವಿಗಳು

ಕಲಬುರಗಿ,ಸೆ.12-ಕಲಬುರಗಿ ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆಯೋಜಿಸಿದ ಕ್ರಿಡಾಕೂಟಕ್ಕೆ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ ಆಲದಾರ್ತಿ ಚಾಲನೆ ನೀಡಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ ಕ್ರೀಡಾಕೂಟದಲ್ಲಿ 60 ರಿಂದ 69, 70 ರಿಂದ 79 ಹಾಗೂ 80 ವರ್ಷ ಮೇಲ್ಪಟ್ಟ ಮೂರು ವಿಭಾಗಗಳನ್ನು ಗುರುತಿಸಿ, ಮಹಿಳಾ ಹಾಗೂ ಪುರುಷ ಹಿರಿಯ ನಾಗರಿಕರಿಗೆ ಮ್ಯೂಜಿಕಲ್ ಚೇರ್, ಬಿರುಸಿನ ನಡಿಗೆ, ಬಕೇಟಿನಲ್ಲಿ ಬಾಲ್ ಹಾಕುವುದು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಾದ ಗಾಯನ ಸ್ಪರ್ಧೆ, ಏಕಾಭಿನಯ ಪಾತ್ರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಹಿರಿಯ ನಾಗರಿಕರು ಉತ್ಸುಕತೆಯಿಂದ ಭಾಗಿಯಾಗಿದ್ದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ್ ಅವರು ಕ್ರೀಡಾಕೂಟದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂಧರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಿವಶರಣಪ್ಪ, ಸರ್ಕಾರಿ ಕಿವುಡ ಮಕ್ಕಳ ಶಾಲೆಯ ಅಧೀಕ್ಷಕ ಡಾ.ಲೋಕೇಶ್, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಅರುಣ್ ಕುಮಾರ್ ಲೋಯಾ, ನಿವೃತ್ತ ಸರ್ಕಾರಿ ನೌಕರರ ಸಂಘದ ವೀರಭೂಷಣ್, ವಿಕೆಜಿ ಸಂಸ್ಥೆಯ ಕಾರ್ಯದರ್ಶಿ ಸಿದ್ದಾರ್ಥ ಕೋರವಾರ, ಮುಖಂಡರಾದ ಅನಂತರಾಜ್, ಮಸ್ತಾನ್ ಬಿರಾದಾರ, ಲಿಂಗರಾಜ್ ತಾರಫೈಲ್, ಮಾತೋಶ್ರೀ ಸ್ವರಸ್ವತಿದೇವಿ ತಾಯಿ, ಖಾಜಾ ಫರಿದೂದಿನ್, ಇಲಾಖೆಯ ಸಿಬ್ಬಂದಿಗಳಾದ ವೀರೇಶ್ ಪತ್ತಾರ, ಮೇಘಾಂಜಲಿ, ಸ್ಮಿತಾ ಹಿರೇಮಠ, ಪ್ರಕಾಶ್ ಭಜಂತ್ರಿ, ಸಂತೋಷ್ ಪಟ್ಟೆದಾರಣ ಪ್ರಕಾಶ ಜಾಧವ್, ಸ್ವಪ್ನಾ ಪಾಟೀಲ್, ಪ್ರಕಾಶ ಜಗತಿ, ಪ್ರಕಾಶ ದ್ಯಾಬೇರಿ, ಅಫ್ಜಲ್, ಅನಂತನಾಗ್ ಕೇದಾರನಾಥ, ಕವಿತಾ, ಭವಾನಿ, ಜಯಶ್ರೀ ಇದ್ದರು.

Related Articles

Leave a Reply

Your email address will not be published. Required fields are marked *

Back to top button