ಜಿಲ್ಲಾಸುದ್ದಿ

ತಾಜ ಸುಲ್ತಾನಪುರದಲ್ಲಿ ಪ್ರಜಾ‌ಸೇವೆ ಸಭೆ:ಜನರ ಸಮಸ್ಯೆ ಆಲಿಸಲೆಂದು ಪ್ರಜಾ ಸೇವೆ

ಸರ್ಕಾರಿ ಸವಲತ್ತು ಪಡೆದು ಉನ್ನತಿ ಕಾಣುವಂತೆ ಅಲ್ಲಮಪ್ರಭು ಪಾಟೀಲ ಕರೆ

ಕಲಬುರಗಿ,ಸೆ.12- ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ಜೊತೆಗೆ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಜನೊರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಸಾಧಿಸಬೇಕೆಂದು ಶಾಸಕ ಅಲ್ಲಮಪ್ರಭು ಪಾಟೀಲ ಕರೆ‌ ನೀಡಿದರು.

ಶನಿವಾರ ಕಲಬುರಗಿ ತಾಲೂಕಿನ ತಾಜ ಸುಲ್ತಾನರದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾ ಸೇವೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆಗೆ ಸರ್ಕಾರ ಪ್ರತಿ ವರ್ಷ 58 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಜನರ ಸಮಸ್ಯೆ ಆಲಿಸಬೇಕು ಮತ್ತು ಆಡಳಿತವನ್ನು ಮನೆ ಬಾಗಿಲಿಗೆ ತೆಗೆದುಕೊಂಡು ಹೋದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಪ್ರಜಾ ಸೇವೆ ಆರಂಭಿಸಿದ್ದಾರೆ ಎಂದರು.

ಕಳೆದ ವರ್ಷ ದಕ್ಷಿಣ ಕ್ಷೇತ್ರದಲ್ಲಿ ಬೆಳೆ‌ ವಿಮೆ‌ ಮಾಡಿಸಿಕೊಂಡ ರೈತರಿಗೆ 30.21 ಕೋಟಿ ರೂ. ಮತ್ತು ರಾಜ್ಯ ಸರ್ಕಾರದಿಂದ ಅತಿವೃಷ್ಠಿಗೆ 7.35 ಕೋಟಿ ರೂ. ಪರಿಹಾರ ಸಿಕ್ಕಿದೆ. ವಿಶೇಷವಾಗಿ ಸೈಯದ್‌ ಚಿಂಚೋಳಿ-ತಾಜ ಸುಲ್ತಾನಪುರ ಗ್ರಾಮದ ರೈತರಿಗೆ 5.57 ಕೋಟಿ ರೂ. ಪರಿಹಾರ ಸಿಕ್ಕಿದೆ ಎಂದರು.

ಈ ಹಿಂದೆಯೂ ಗ್ರಾಮದಲ್ಲಿ ಬಂದು ತಮ್ಮ‌ ಸಮಸ್ಯೆ ಆಲಿಸಿರುವೆ. ತಾಜ ಸುಲ್ತಾನಪುರ-ಬೇಲೂರ ಸಂಪರ್ಕ ಕಲ್ಪಿಸುವ 2 ಕೋಟಿ ರೂ. ರಸ್ತೆ ಕಾಮಗಾರಿ ಕಲ್ಯಾಣ ಪಥದಲ್ಲಿ ಕೈಗೆತ್ತಿಕೊಂಡಿದೆ‌. ಸುಲ್ತಾನಪುರ-ಗಣಜಲಖೇಡ್ ರಸ್ತೆ 50 ಲಕ್ಷ ರೂ. ವೆಚ್ಚದಲ್ಲಿ ಪೂರ್ಣಗೊಳಿಸಿದೆ. 20 ಲಕ್ಷ ರೂ. ಗ್ರಾಮದ ರುದ್ರಭೂಮಿಗೆ, ಹನುಮಾನ‌ ದೇವಸ್ಥಾನದ ಜೀರ್ಣೋದ್ಧಾರಕ್ಕೆ 7 ಲಕ್ಷ ರೂ. ಹಾಗೂ 3 ಲಕ್ಷ ರೂ. ಬೀರಲಿಂಗೇಶ್ವರ ದೇವಸ್ಥಾಕ್ಕೆ ನೀಡಿದೆ. ಅಂಬೇಡ್ಕರ್ ಸಮುದಾಯ‌ ಭವನಕ್ಕೂ ಅನುದಾನ‌ ನೀಡಲಾಗುವುದು ಎಂದ ಅವರು, ಗ್ರಾಮಾಭಿವೃದ್ಧಿಗೆ ನಮ್ಮ ಸರ್ಕಾರ ಬದ್ದವಾಗಿದೆ‌ ಎಂದರು.

ಯುವಕರು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಮತ್ತು ನಾಯಕ್ತವದ ಗುಣಗಳನ್ನು ಬೆಳೆಸಿಕೊಳ್ಳಬೇಕೆಂಬ ಉದ್ದೇಶದಿಂದ‌ ಭಾರತ್ ಜೋಡೋ ಯುವಕ ಸಂಘ ರಚನೆ‌ ಮಾಡಲಾಗುತ್ತಿದೆ. ವಾರ್ಷಿಕ ತಲಾ ಸಂಘಕ್ಕೆ‌ 10 ಲಕ್ಷ ರೂ. ನೀಡಲಾಗುತ್ತಿದ್ದು, 16 ರಿಂದ 35 ವರ್ಷದ ಯುವಕ-ಯುವತಿಯರು‌ ಸಂಘದ ಸದಸ್ಯರಾಗಬೇಕೆಂದು ಇದೇ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಇಕ್ರಂ ಶರೀಫ್ ಮಾತನಾಡಿ ಒಟ್ಟು 6 ಕೌಂಟರ್ ಇಲ್ಲಿ ತೆರೆಯಲಾಗಿದೆ. ಗ್ರಾಮಸ್ಥರು ತಮ್ಮ‌ ಏನೇ ಸಮಸ್ಯೆ ಗಳಿದಲ್ಲಿ ಕೌಂಟರ್‌ನಲ್ಲಿ ಲಿಖಿತ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು‌. ಅರ್ಜಿ‌ ಸಲ್ಲಿಸದೆ ಕೇವಲ ನಮ್ಮಲಿ‌ಬಂದು ಮೌಖಿಕವಾಗಿ ತಿಲಿಸಿದರೆ‌ ಸಮಸ್ಯಡ ಬಗೆಹರಿಯುವುದಿಲ್ಲ. ಇಡೀ ದಿನ‌ ನಿಮಗಾಗಿ ಆಡಳಿತ ವರ್ಗ ಇಲ್ಲಿರಲಿದೆ. ನಿಮ್ಮ ಸಮಸ್ಯೆ ಆಲಿಸಲಿದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮಾತನಾಡಿ ಪ್ರಸ್ತುತ ವರ್ಷ ಬರಗಾಲದ ಚಾಯೆ ಆವರಿಸಿದೆ. ಬೆಳೆ‌ ದರ್ಶಕ ತಂತ್ರಾಂಶದ‌ ಮೂಲಕ ಬೆಳೆಯನ್ನು ದಾಖಲಿಸುವುರು. ಈ ವರ್ಷ 4.53 ಲಕ್ಷ ರೈತರು ಬೆಳೆ‌ ವಿಮೆ‌ ನೋಂದಣಿ ಮಾಡಿಸಿ 5.50 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಬೆಳೆ ವಿಮೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ 585 ಕೋಟಿ ರೂ. ಬೆಳೆ ಪರಿಹಾರ ರೈತರಿಗೆ ನೀಡಲಾಗಿದೆ. ಸರ್ಕಾರ ರೈತರಿಗೆ ಕೃಷಿ ಯಂತ್ರೋಪಕರಣ ಬಾಡಿಗೆ ಪಡೆಯಲು, ಬೀಜ, ಔಷದ ಸಿಂಪಡಣೆ ಡ್ರೋನ್ ಸೌಲಭ್ಯ ಪಡೆಯುವ ಅನೆಕ ಸವಲತ್ತು ಕಲ್ಪಿಸಿದ್ದು, ರೈತ ಬಾಂಧವರು ಸೌಲಭ್ಯ ಪಡೆಯಬೇಕೆಂದು ಕೋರಿದರು.

ಸಭೆಗೆ ಮಹಿಳೆಯರು ದಂಡು:

ಪ್ರಜಾ ಸೇವೆ‌ ಸಭೆಗೆ ಗ್ರಾಮದ ಮಹಿಳೆಯರು ದಂಡೆ ಅಗಮಿಸಿತ್ತು. ಗೃಹಲಕ್ಷ್ಮೀ‌ ಹಣ ಬಂದಿಲ್ಲ, ವಿಬಿ-ಜಿ-ರಾಮ್ ಜಿ ಯೋಜನೆಯಡಿ ಕೆಲಸ ನೀಡಿಲ್ಲ, ವೃದ್ಧಾಪ್ಯ ವೇತನ ಸ್ಥಗಿತಗೊಂಡಿದೆ‌ ಹೀಗೆ ತರಹೆವಾರಿ ಸಮಸ್ಯೆಗಳ ಪರಿಹಾರಕ್ಕೆ ಮಹಿಳೆಯರು ಶಾಸಕರು ಮುಂದೆ ಬೇಡಿಕೆ ಇಟ್ಟರು.

ಗ್ರಾಮ‌ದ ಹಿರಿಯ ಮುಖಂಡ ಚಂದ್ರಶೇಖರ ಪಾಟೀಲ ಮಾತನಾಡಿ, ಪ್ರಸ್ತುತ ಬರಗಾಲವಿರುವ ಕಾರಣ ತಾಜಸುಲ್ತಾನಪೂರ ಸೈಯದ್ ಚಿಂಚೋಳಿ ಗ್ರಾಮಕ್ಕೆ ಕುಡಿಯುವ‌ ನೀರಿನ ಸಮಸ್ಯೆ ಹೆಚ್ಚಿದ್ದು, ಭೋಸಗಾ ಕೆರೆ‌ ಮೂಲಕ ಹಳ್ಳಕ್ಕೆ ನೀರು ಬಿಟ್ಟಿದಲ್ಲಿ ದನಕರುಗಳಿಗೆ ನೀರು ದೊರೆಯುವುದಲ್ಲದೆ ಗ್ರಾಮದಲ್ಲಿ ಬಾವಿಗಳು ರಿಚಾರ್ಜ್ ಆಗಿ ಕುಡಿಯುವ ನೀರು ಲಭ್ಯವಾಗಲಿವೆ ಎಂದರು.

ಗ್ರಾಮದ ಯುವಕ ಗುರು ಸುಲ್ತಾನಪುರ ಮಾತನಾಡಿ, ಗಂಟೆಗೆ 7 ಗಂಟೆ‌ ವಿದ್ಯುತ್ ಬದಲು ಕೇವಲ‌ 2 ಗಂಟೆ ನೀಡುತ್ತಿರುವುದರಿಂದ ನೀರಿಲ್ಲದೆ ಬೆಳೆದ‌ ಕಬ್ಬು ಒಣಗಿವೆ. ಗ್ರಾಮಕ್ಕೆ ನಿರಂತರ ವಿದ್ಯುತ್ ಒದಗಿಸಿ ಎಂದು ಶಾಸಕರಲ್ಲಿ ಬೇಡಿಕೆ ಇಟ್ಟರು. ಕೂಡಲೆ ಸಮಸ್ಯೆ ಬಗೆಹರಿಸುವಂತೆ ಜೆಸ್ಕಾಂ ಕಿರಿಯ ಇಂಜಿನೀಯರ್ ರಾಹುಲದೇವ ಅವರಿಗೆ ಎಂ.ಎಲ್.ಎ. ಸೂಚನೆ ಕೊಟ್ಟರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಓ ರಾಹುಲ‌ ಸಂಕನೂರ, ಡಿ.ಸಿ.ಪಿ ಶಾಲೂ, ಸಹಾಯಕ ಆಯುಕ್ತರಾದ ರಿತಿಕಾ ವರ್ಮಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ, ಡಿ.ಡಿ.ಪಿ.ಐ ಶಂಕ್ರಮ ಢವಳಗಿ, ಡಿ.ಎಚ್.ಓ ಡಾ.ಶರಣಬಸಪ್ಪ‌ ಕ್ಯಾತನಾಳ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಸಂಗಮೇಶ, ಜಿಲ್ಲಾ‌ ಉದ್ಯೋಗ ಅಧಿಕಾರಿ ಭಾರತಿ, ತಾಲೂಕಾ ಪಂಚಾಯತ್ ಇ.ಓ ಮಾನಪ್ಪ ಕಟ್ಟಿಮನಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು‌ ಮಟ್ಟದ ಅಧಿಕಾರಿಗಳಿದ್ದರು. ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ ಪ್ರಸ್ತಾವಿಕವಾಗಿ ಮಾತನಾಡಿ, ಪ್ರಜಾ ಸೇವೆ ಸಭೆಯ ಉದ್ದೇಶ ವಿವರಿಸಿದರು.

Related Articles

Leave a Reply

Your email address will not be published. Required fields are marked *

Back to top button