ಅಪರಾಧ

ಎಚ್‌ಪಿ ಕಂಪನಿಯ ಲೇಬಲ್ ಅಂಟಿಸಿ ನಕಲಿ ಹೈಡ್ರಾಲಿಕ್ ಆಯಿಲ್ ಮಾರಾಟ: 13 ಕ್ಯಾನ್‌ಗಳ ಜಪ್ತಿ

ರೋಜಾ ಠಾಣೆ ಪೊಲೀಸರ ದಾಳಿ; ಸುಮಾರು ₹60 ಸಾವಿರ ಮೌಲ್ಯದ ನಕಲಿ ಆಯಿಲ್ ವಶಕ್ಕೆ

ಎಚ್‌ಪಿ (HP) ಕಂಪನಿಯ ಲೇಬಲ್ ಅಂಟಿಸಿ ನಕಲಿ ಹೈಡ್ರಾಲಿಕ್ ಆಯಿಲ್ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ರೋಜಾ ಠಾಣೆ ಪೊಲೀಸರು ದಾಳಿ ನಡೆಸಿ 13 ಕ್ಯಾನ್‌ಗಳ ನಕಲಿ ಆಯಿಲ್ ಜಪ್ತಿ ಮಾಡಿದ್ದಾರೆ.

ನಗರದ ಹೊರವಲಯದ ಹುಮನಾಬಾದ್ ರಸ್ತೆಯಲ್ಲಿರುವ ಜಹೀರ್ ಅಬ್ಬಾಸ್ ಇಕ್ಬಾಲ್ ಹುಸೇನ್ ಅವರಿಗೆ ಸೇರಿದ ಅಂಗಡಿಯಲ್ಲಿ ನಕಲಿ ಹೈಡ್ರಾಲಿಕ್ ಆಯಿಲ್ ಮಾರಾಟವಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಈ ವೇಳೆ ಸುಮಾರು ₹60 ಸಾವಿರ ಮೌಲ್ಯದ 13 ಕ್ಯಾನ್‌ಗಳ ನಕಲಿ ಆಯಿಲ್ ಅನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಎಚ್‌ಪಿ ಕಂಪನಿಯ ಮ್ಯಾನೇಜರ್ ಫಾರೆನ್ಸಿಸ್ ಪಾಲ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ರೋಜಾ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದಿಲೀಪ್ ಸಾಗರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಲಕ್ಷ್ಮೀ, ಅಂಬರೀಶ್, ಸಿಕಂದರ್ ಖಾನ್ ಹಾಗೂ ಸಿರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button