ಜಿಲ್ಲಾಸುದ್ದಿ

ಬಡ ದಲಿತ ಕುಟುಂಬದ ವಿದ್ಯಾರ್ಥಿ ಮನೋಜ್‌ಕುಮಾರ್‌ಗೆ ಎಂಬಿಬಿಎಸ್ ಸೀಟು

ಜೇವರ್ಗಿ, ಸೆ.18: ತಾಲ್ಲೂಕಿನ ಜನಿವಾರ ಗ್ರಾಮದ ಬಡ ದಲಿತ ಕುಟುಂಬಕ್ಕೆ ಸೇರಿದ ಮನೋಜ್‌ಕುಮಾರ್ ಅವರು ಎಂಬಿಬಿಎಸ್ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಜನಿವಾರ ಗ್ರಾಮದ ಸಿದ್ಧಪ್ಪ ಶರ್ಮಾ ಅವರ ಪುತ್ರ ಮನೋಜ್‌ಕುಮಾರ್ ಅವರು ಪಟ್ಟಣದ ಗುರುಕುಲ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಪೂರ್ಣಗೊಳಿಸಿದ್ದರು. ಬಳಿಕ ಎಸ್‌ಆರ್‌ಇ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಕಠಿಣ ಪರಿಶ್ರಮದಿಂದ 2025ರಲ್ಲಿ ನಡೆದ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು.

ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ 2026–27ನೇ ಶೈಕ್ಷಣಿಕ ಸಾಲಿಗೆ ಎಂಬಿಬಿಎಸ್ ವೈದ್ಯಕೀಯ ಶಿಕ್ಷಣದ ಸೀಟು ಪಡೆದುಕೊಂಡಿದ್ದಾರೆ.

ಬಡ ಕುಟುಂಬದಿಂದ ಬಂದರೂ ಸತತ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಶಿಕ್ಷಣದ ಮೇಲಿನ ಆಸಕ್ತಿಯಿಂದ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಮನೋಜ್‌ಕುಮಾರ್ ಅವರ ಸಾಧನೆ ಗ್ರಾಮಸ್ಥರು ಹಾಗೂ ಕುಟುಂಬದವರಲ್ಲಿ ಸಂತಸ ಮೂಡಿಸಿದೆ.

Related Articles

Leave a Reply

Your email address will not be published. Required fields are marked *

Back to top button