ಅಪರಾಧಜಿಲ್ಲಾಸುದ್ದಿ
ಸಾಲದ ಬಾಧೆಗೆ ಯುವ ರೈತ ಆತ್ಮಹತ್ಯೆ
₹16 ಲಕ್ಷಕ್ಕೂ ಅಧಿಕ ಸಾಲದ ಒತ್ತಡ ತಾಳಲಾರದೆ ಕೀಟನಾಶಕ ಸೇವನೆ; ಚಿಕಿತ್ಸೆ ಫಲಕಾರಿಯಾಗದೆ ಸಾವು
ಅಫಜಲಪುರ, ಜು.27: ಸಾಲದ ಬಾಧೆಯಿಂದ ಮನನೊಂದ ಯುವ ರೈತನೊಬ್ಬ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಿಂಚಗೇರಾ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಅಂಬರೀಷ್ (21) ಎಂದು ಗುರುತಿಸಲಾಗಿದೆ.
ಕುಟುಂಬದ ಹೆಸರಿನಲ್ಲಿ ಕೆನರಾ ಬ್ಯಾಂಕ್ನಿಂದ ಸುಮಾರು ₹6 ಲಕ್ಷ ಹಾಗೂ ಖಾಸಗಿಯಾಗಿ ಸುಮಾರು ₹10 ಲಕ್ಷ ಸಾಲ ಮಾಡಲಾಗಿತ್ತು ಎನ್ನಲಾಗಿದೆ. ಸಾಲ ನೀಡಿದವರು ಹಣ ವಸೂಲಿಗಾಗಿ ಆಗಾಗ ಮನೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಕುಟುಂಬ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿತ್ತು ಎಂದು ತಿಳಿದುಬಂದಿದೆ.
ಮನನೊಂದ ಅಂಬರೀಷ್ ಕೀಟನಾಶಕ ಸೇವಿಸಿದ ಬಳಿಕ ಕುಟುಂಬಸ್ಥರು ತಕ್ಷಣವೇ ಅವರನ್ನು ಅಫಜಲಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



